ಪಾಕಿಸ್ತಾನದ ನೂರ್ಖಾನ್ ಏರ್ಬೇಸಿನ ನಿಯಂತ್ರಣ ಯಾರಿಗೆ ? ಭಾರತದ ಬ್ರಹ್ಮೋಸ್ ದಾಳಿ ಜಾಗತಿಕ ಚರ್ಚೆ
ಪಾಕಿಸ್ತಾನದ ನೂರ್ಖಾನ್ ಏರ್ಬೇಸ್ ಯಾರು ನಿಜವಾಗಿ ನಿಯಂತ್ರಿಸುತ್ತಿದ್ದಾರೆ ಎಂಬ ಪ್ರಶ್ನೆ ಇದೀಗ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. 2000ರಿಂದ ಅಮೆರಿಕದ ನಿಯಂತ್ರಣದಲ್ಲಿ ಇದಿದೆಯೆಂಬ ಶಂಕೆಗಳಿದ್ದು, ಪಾಕ್ ಸೇನೆಗೆ ಪ್ರವೇಶವಿಲ್ಲ ಎನ್ನಲಾಗುತ್ತಿದೆ.

ಭಾರತದ ಒಳಗೂ ಹೊರಕ್ಕೂ, ಪಾಕಿಸ್ತಾನದಲ್ಲಿಯೂ, ಹಲವು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯೂ 'ನೂರ್ಖಾನ್ ಏರ್ಬೇಸ್' ನ ನಿಯಂತ್ರಣ ಯಾರ ಕೈಯಲ್ಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ವಿಷಯದಲ್ಲಿ ನಾನು ಇಲ್ಲಿ ಹೇಳುತ್ತಿರುವ ಅಭಿಪ್ರಾಯ ಪಾಕಿಸ್ತಾನದ ಪರಿಣಿತರು ಹೇಳಿದ ವಿಷಯಗಳೇ ಹೊರತು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ.
‘ನೂರ್ಖಾನ್ ಏರ್ಬೇಸ್’ ಅಮೆರಿಕದ ನಿಯಂತ್ರಣದಲ್ಲಿದೆ’ ಎಂಬ ಮೊದಲ ಹೇಳಿಕೆ ಇಂಥಿಯಾಸ್ ಗುಲ್ ಎಂಬ ಪಾಕಿಸ್ತಾನ ತಜ್ಢನಿಂದ ಬಂದಿರುವಂತಹುದ್ದು. ಅವರಂತೆ, ಇನ್ನೂ ಹಲವರು ಇದೇ ಅಭಿಪ್ರಾಯ ಹೇಳುತ್ತಿದ್ದಾರೆ. ಅಂದರೆ, ಪಾಕಿಸ್ತಾನ ಆರ್ಮಿಗೆ ಕೂಡ ಪ್ರವೇಶವಿಲ್ಲದ ಈ ನೂರ್ಖಾನ್ ಏರ್ಬೇಸ್ ಬಹಳ ಕಾಲದಿಂದ (೨೦೦೦ ದ ನಂತರ) ಅಮೆರಿಕನ ನಿಯಂತ್ರಣದಲ್ಲಿ ಇದೆ ಎನ್ನುವ ಒಂದು ಅಂದಾಜು.
ಈ ನೂರ್ಖಾನ್ ಏರ್ಬೇಸ್ ಭಾರತ ದಾಳಿ ನಡೆಸಿದ ಹಲವಾರು ಏರ್ಬೇಸುಗಳಲ್ಲಿ ಒಂದು. ದಾಳಿಯ ಸಮಯದಲ್ಲಿ ಅಲ್ಲಿ ಇದ್ದ ಹಲವಾರು ವಿಮಾನಗಳು, ನಿಯಂತ್ರಣ ಘಟಕಗಳು ನಾಶವಾಯಿತು. ಬಹಳ ಮಂದಿ ಸಾವನ್ನಪ್ಪಿರಲೂಬಹುದು. ವಿಷಯ ಏನೆಂದರೆ – ಈ ಏರ್ಬೇಸ್ನಲ್ಲಿದ್ದವರು ಅಮೇರಿಕಾವರೋ ಅಥವಾ ಪಾಕಿಸ್ತಾನದವರೋ ? ಈ ದಾಳಿಯ ನಂತರವಾಗಿದೆ ಪಾಕಿಸ್ತಾನ ಭಾರತದೊಂದಿಗಿನ ಯುದ್ಧ ನಿಲುಗಡೆಯ ಅಭಿಪ್ರಾಯಪಟ್ಟದ್ದು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಸೇರಿದಂತೆ ಹಲವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದರು ಎಂದು ಸುದ್ದಿಯಿದೆ. ಅದಕ್ಕೆ ಪ್ರತ್ಯುತ್ತರವಾಗಿ ಯುದ್ಧ ನಿಲುಗಡೆಗೆ ಪಾಕಿಸ್ತಾನಕ್ಕೆ ಆಸಕ್ತಿಯಿದ್ದರೆ ಅವರೇ ಕರೆ ಮಾಡಲಿ ಎಂದು ಭಾರತ ಹೇಳಿರಬಹುದು. ಹಾಗೆ ಯುದ್ಧ ಮುಕ್ತಾಯವಾಗಲು ಇದು ಕಾರಣವಾಗಿರಲೂಬಹುದು.
ತಟ್ಟನೆ ಯುದ್ಧ ನಿಂತಾಗ ಏನು ಕಾರಣ ಎಂದು ನಮಗೆಲ್ಲಾ ಆಶ್ಚರ್ಯವಾಗಿತ್ತು. ಭಾರತ ನೂರ್ಖಾನ್ ಏರ್ಬೇಸ್ಗೆ ಧಾಳಿ ನಡೆಸಿದಾಗ ಅಮೆರಿಕದ ಅನೇಕ ವಿಮಾನಗಳು ಅಲ್ಲಿ ನಿಂತಿದ್ದವು. ಒಂದು ದೊಡ್ಡ ಸರಕು ವಿಮಾನ ಸೇರಿದಂತೆ, ಅಮೆರಿಕದ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಕೂಡ ಈ ತಾಣದಲ್ಲಿ ಇದ್ದಿರಬಹುದು ಎಂಬ ಶಂಕೆಗಳು ಹೆಚ್ಚಾಗಿವೆ.
‘ಆಪರೇಶನ್ ಸಿಂಧೂರ್’ ಭಾಗವಾಗಿ ಭಾರತವು ಪಾಕಿಸ್ತಾನದ ವಿವಿಧ ಏರ್ಬೇಸ್ಗಳಲ್ಲಿ ದಾಳಿ ನಡೆಸಿತ್ತು, ಇದರಲ್ಲಿ ನೂರ್ಖಾನ್ ಏರ್ಬೇಸ್ ಪ್ರಮುಖ. ಈ ಏರ್ಬೇಸ್ಗೆ ಬಹುದೊಡ್ಡ ಹಾನಿಯಾಗಿದ್ದು, ಮುಂದಿನ 5–10 ವರ್ಷಗಳಲ್ಲಿ ಮಾತ್ರ ಮತ್ತೆ ಕಾರ್ಯನಿರ್ವಹಣೆಗೆ ತಯಾರುಮಾಡುವ ಸ್ಥಿತಿಯುಂಟಾಗಿದೆ ಎಂದು ಅನೇಕ ರಕ್ಷಣಾ ತಜ್ಞರು ಹೇಳುತ್ತಿದ್ದಾರೆ.
ಸ್ವಾಭಾವಿಕವಾಗಿ ಈ ನೂರ್ಖಾನ್ ಏರ್ಬೇಸಿನ ನಿಯಂತ್ರಣ ಅಮೆರಿಕನ ಹಸ್ತದಲ್ಲಿದ್ದರೆ, ಅಲ್ಲಿ ಅಮೆರಿಕನ್ನರು ಇದ್ದಿರಬೇಕು, ಅಮೇರಿಕಾದ ಸರಕು ವಿಮಾನಗಳು ಇದ್ದಿರಬಹುದು. ಮಾತ್ರವಲ್ಲ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗಳು ಕೂಡ ಅಲ್ಲಿ ಸ್ಥಾಪಿಸಲ್ಪಟ್ಟಿರುತ್ತವೆ. ಧಾಳಿಗೆ ಬ್ರಹ್ಮೋಸ್ ಮಿಸೈಲನ್ನು ಕೂಡಾ ಭಾರತ ಬಳಸಿತ್ತು. ಹಾಗಿದ್ದರೆ ಬ್ರಹ್ಮೋಸನ್ನು ತಡೆಯುವಲ್ಲಿ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದರ್ಥವಲ್ಲವೇ.
ಅಮೇರಿಕಾದ C‑30 ಎಂಬ ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ಗಳು ಧಾಳಿಯಿಂದ ಹಾನಿಗೊಂಡಿವೆಯೆಂಬ ಸುದ್ದಿಯೂ ಆ ಸಮಯದಲ್ಲಿ ಬಂದಿತ್ತು. ಈ ವಿಮಾನಗಳು ಪಾಕಿಸ್ತಾನವೇ ಪರಿಪೂರ್ಣವಾಗಿ ಹ್ಯಾಂಡಲ್ ಮಾಡುತ್ತಿರುವುದೋ, ಇಲ್ಲ ಅಮೆರಿಕನ ತಮ್ಮ ಕಾರ್ಯಗಳಿಗೆ ಬಳಸುತ್ತಿರುವುದೋ ಎಂಬುದು ಸ್ಪಷ್ಟವಲ್ಲ. ಅಫ್ಗಾನಿಸ್ತಾನ್ ವಿರುದ್ಧ ನಡೆಯುತ್ತಿದ್ದ ಯುದ್ಧಗಳಿಗೆ ಅಮೆರಿಕವು ಈ ನೂರ್ಖಾ ಏರ್ಬೇಸನ್ನು ಬಳಸುತ್ತಿತ್ತು.
ಅಮೇರಿಕ ಅಧಿಕೃತವಾಗಿ ಈ ಏರ್ಬೇಸ್ ತಮ್ಮದ್ದು ಎನ್ನುವುದನ್ನು ಒಪ್ಪುತ್ತಿಲ್ಲ. ಅದು ಒಳ್ಳೆಯದೇ ಆಯಿತು. ಆದರೆ, ಈ ಏರ್ಬೇಸ್ನಲ್ಲಿದ್ದ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗಳು ಭ್ರಹ್ಮೋಸನ್ನು ತಡೆಯುವಲ್ಲಿ ವಿಫಲವಾಗಿದೆ ಎಂಬುದಂತು ಸತ್ಯ.
What's Your Reaction?






