ಸುದರ್ಶನ ಚಕ್ರ : ಭಾರತೀಯ ವಾಯು ರಕ್ಷಣಾ ಶಕ್ತಿಯ ನವ ಚಕ್ರವ್ಯೂಹ

ಆದರೂ ಭಾರತ ತನ್ನ ದೃಢ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಎಷ್ಟೇ ಧಮಕಿ ಬಂದರೂ ಭಾರತವು ತನ್ನ ನಿರ್ಧಾರದಲ್ಲಿ ಅಡಗದೆ, ಈ ಎಸ್-400 ಖರೀದಿಯನ್ನು ಮುಂದುವರೆಸಿತು. ಕೊನೆಗೆ, ಅಮೆರಿಕ ಒಂದು ಹೆಜ್ಜೆ ಹಿಂದಕ್ಕೆ ಹಾಕಬೇಕಾಯಿತು. 2022ರ ಜನವರಿಯಲ್ಲಿ, ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ವಿಶೇಷ CAATSA (AMENDMENT) ಅನ್ನು ಮಂಡಿಸಲಾಯಿತು. ಇದರಡಿಯಲ್ಲಿ ಭಾರತಕ್ಕೆ ಒಂದು ವೇವರ್ (ರಿಯಾಯಿತಿ) ನೀಡಲಾಗಿದ್ದು, ಭಾರತವು ರಷ್ಯಾದಿಂದ ಈ ಎಸ್-400 ವ್ಯವಸ್ಥೆಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಯಿತು.

Jun 17, 2025 - 21:34
Jun 17, 2025 - 21:36
 0  26
ಸುದರ್ಶನ ಚಕ್ರ : ಭಾರತೀಯ ವಾಯು ರಕ್ಷಣಾ ಶಕ್ತಿಯ ನವ ಚಕ್ರವ್ಯೂಹ

ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಯುದ್ಧಕ್ಕೆ ಸಮಾನವಾಗಿಯೇ ಮುಂದುವರೆದಿತ್ತು. ಆದರೆ ಈಗ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಒಂದು ಯುದ್ಧ ವಿರಾಮ ಒಪ್ಪಂದಕ ಕಾರ್ಯರೂಪಕ್ಕೆ ಬಂದಿದೆ.ಎರಡು ರಾಷ್ಟ್ರಗಳ ನಡುವೆ ಯುದ್ಧ ಸಮಾನವಾದ ಪರಿಸ್ಥಿತಿ ಉಂಟಾದಾಗ ಅದು ಸ್ವಾಭಾವಿಕವಾಗಿ ಭೀತಿದಾಯಕವಾಗಿರುತ್ತದೆ. ಆದಾಗ್ಯೂ, ಅಂತಹ ಸಮಯದಲ್ಲಿ ಭಾರತೀಯ ಸೇನೆ ಎಷ್ಟು ಅಗ್ರಗಣ್ಯವಾಗಿದೆ ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದಾದ ಸಂದರ್ಭದಲ್ಲಿ ಆಗಿತ್ತು ಅದು.

ಭಾರತದ ಸೇನಾ ಶಕ್ತಿ ಮತ್ತು ಭಾರತದ ರಾಜತಾಂತ್ರಿಕ ಶಕ್ತಿಯನ್ನೂ ಪರಿಣಾಮಕಾರಿಯಾಗಿ ತೋರಿಸಿದ ಸಮಯವೆಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣಾ ಕಾಲವನ್ನು ಪರಿಗಣಿಸಬಹುದು. ಘರ್ಷಣೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್‌ಗಳು ಅಥವಾ ಕ್ಷಿಪಣಿಗಳು ಭಾರತೀಯ ಭೂಮಿಗೆ ತಲುಪದಂತೆ ತಡೆಗಟ್ಟಿದ ಒಂದು ಸಿಸ್ಟಮ್, ಭಾರತದ ಹೆಮ್ಮೆಯಸುದರ್ಶನ ಚಕ್ರಎಂದೇ ಕರೆಯಲ್ಪಡುವ ಎಸ್ಸ್-400 ಟ್ರಯಂಫ್ ಯರ್ ಡಿಫೆನ್ಸ್ ಸಿಸ್ಟಮ್ ಆಗಿದೆ.

ಎಸ್-400 ಎಯರ್ ಡಿಫೆನ್ಸ್ ಸಿಸ್ಟಮ್ ಅಂದರೆ ಏನು? ಅದರ ವಿಶೇಷತೆಗಳು ಯಾವುವು? ಹೇಗೆ ಇದು ಕಾರ್ಯನಿರ್ವಹಿಸುತ್ತದೆ? ಇವೆಲ್ಲಾ ವಿಷಯಗಳನ್ನೇ ನಾವು ಲೇಖನದಲ್ಲಿ ಚರ್ಚಿಸುವ.

ಮೊದಲು ಎಸ್-400 ಟ್ರಯಂಫ್ ಎಯರ್ ಡಿಫೆನ್ಸ್ ಸಿಸ್ಟಮ್ ಅಂದರೆ ಏನು ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ. ರಷ್ಯಾದ ಅಲ್ಮಾಸ್-ಅಂತೇ ಕೋರ್‌ಪೊರೇಷನ್ ಎಂಬ ಕಂಪನಿಯು ಡಿಫೆನ್ಸ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ. ನಾಟೋ ಇದನ್ನು ಎಸ್‌ಎ-21 ಗ್ರೌಲರ್ ಎಂದು ಕರೆಯುತ್ತದೆ. ಆದರೆ ರಷ್ಯಾ ವ್ಯವಸ್ಥೆಗೆ ನೀಡಿರುವ ಅಧಿಕೃತ ಹೆಸರು ಎಸ್-400 ಟ್ರಯಂಫ್ ಎಂಬುದು. ಭಾರತವು ವ್ಯವಸ್ಥೆಯನ್ನು ತನ್ನ ಸೇನಾ ಶಕ್ತಿಗೆ ಸೇರಿಸಿಕೊಂಡಾಗ ಅದಕ್ಕೆ "ಸುದರ್ಶನ ಚಕ್ರ" ಎಂದು ಹೆಸರಿಟ್ಟಿತು.

ಇಂದು ಜಗತ್ತಿನಲ್ಲಿ ಲಭ್ಯವಿರುವ ಅತ್ಯಾಧುನಿಕ ಎಯರ್ ಡಿಫೆನ್ಸ್ ವ್ಯವಸ್ಥೆಗಳ ಪೈಕಿ ಮುಖ್ಯವಾದದ್ದು ಎಂಬ ಹೆಗ್ಗಳಿಕೆಗೆ ಎಸ್-400 ಟ್ರಯಂಫ್ ಪಾತ್ರವಾಗಿದೆ. ಹೀಗಾಗಿ, ವ್ಯವಸ್ಥೆಯ ಸಾಮರ್ಥ್ಯವೇನು? ಇದರಿಂದ ಏನು ಮಾಡಬಹುದು? ಎಂಬ ಪ್ರಶ್ನೆಗಳ ಉತ್ತರವನ್ನು ನಾವು ಇತ್ತೀಚಿನ ಕೆಲವು ದಿನಗಳಲ್ಲಿ ಕಂಡುಬಂದ ಘಟನಗಳಿಂದಲೇ ಸ್ಪಷ್ಟವಾಗಿ ತಿಳಿದಿರುತ್ತೇವೆ. ಪಾಕಿಸ್ತಾನದಿಂದ ಬಂದ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಯುದ್ಧವಿಮಾನಗಳು ಭಾರತದ ಭೂಮಿಯನ್ನು ತಲುಪದಂತೆ ತಡೆದದ್ದು ಎಸ್-400 ವ್ಯವಸ್ಥೆಯ ಪ್ರಮುಖ ಸಾಮರ್ಥ್ಯವಾಗಿತ್ತು.

ತಾಂತ್ರಿಕ ದೃಷ್ಟಿಯಿಂದ ವ್ಯವಸ್ಥೆಯಿಂದ ನಿಜವಾಗಿಯೂ ನಾವು ಏನು ಮಾಡಲು ಸಾಧ್ಯವಿದೆ ಎಂಬುದನ್ನು ಮೊದಲಿಗೆ ಗಮನಿಸೋಣ. ಎಸ್-400 ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ, ಇದು ಒಂದು ಮಲ್ಟಿ-ಲೆಯರ್ಡ್ ಡಿಫೆನ್ಸ್ ಸಿಸ್ಟಮ್ ಆಗಿದೆ. ಅಂದರೆ, ವಿವಿಧ ಹಂತಗಳಲ್ಲಿ ಶತ್ರುಗಳ ವೈಮಾನಿಕ ಧಾಳಿಗಳನ್ನು ತಡೆಹಿಡಿಯಲು ವ್ಯವಸ್ಥೆ ಸಿದ್ಧವಾಗಿದೆ. ವಿವಿಧ ರೀತಿಯ ವೈಮಾನಿಕ  ಧಾಳಿಯ ಗುರಿಗಳನ್ನು (aerial targets) ನಿಖರವಾಗಿ ಪತ್ತೆಹಚ್ಚಿ ನಾಶಪಡಿಸಲು ಇದಕ್ಕೆ ಸಾಮರ್ಥ್ಯವಿದೆ. ಉದಾಹರಣೆಗೆ- ಫೈಟರ್ ಜೆಟ್‌ಗಳು, ಮಿಸೈಲ್ಗಳು (ಕ್ರೂಯಿಸ್ ಮತ್ತು ಬ್ಯಾಲಿಸ್ಟಿಕ್), ಡ್ರೋನ್‌ಗಳು, ಸ್ಟೆಲ್ತ್ ಯುದ್ಧವಿಮಾನಗಳು ಮುಂತಾದವುಗಳನ್ನೆಲ್ಲಾ ನಿಖರವಾಗಿ ಪತ್ತೆಹಚ್ಚಿ ನಾಶಪಡಿಸಲು ಎಸ್-400 ಟ್ರಯಂಫ್‌ಗೆ ಸಾಧ್ಯ.

ಇನ್ನೊಂದು ಮಹತ್ವದ ವೈಶಿಷ್ಟ್ಯವೆಂದರೆ ವ್ಯವಸ್ಥೆ 600 ಕಿಲೋಮೀಟರ್ ವ್ಯಾಪ್ತಿಯೊಳಗಿನ ಯಾವುದೇ ಅಪಾಯವನ್ನೂ ಪತ್ತೆಹಚ್ಚಲು ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಒಂದೇ ಸಮಯದಲ್ಲಿ 300 ಟಾರ್ಗೆಟ್‌ಗಳನ್ನು ಟ್ರಾಕ್ ಮಾಡಬಹುದಾಗಿದೆ ಮತ್ತು 36 ರಿಂದ 48 ಟಾರ್ಗೆಟ್‌ಗಳನ್ನು ಏಕಕಾಲದಲ್ಲಿ ನಾಶಪಡಿಸಲು ಸಾಧ್ಯವಿದೆ. ಇದೇನು ಕಡಿಮೆ ಸಾಧನೆ ಅಲ್ಲ.

ಇನ್ನೊಂದು ವಿಶಿಷ್ಟತೆ ಎಂದರೆವೇಗವಾಗಿ ಚಲಿಸುವ ಟಾರ್ಗೆಟ್‌ಗಳನ್ನೂ ವ್ಯವಸ್ಥೆ ಟ್ರಾಕ್ ಮಾಡಿ ನಿಖರವಾಗಿ ಹೊಡೆದುಹಾಕಬಲ್ಲದು. ಮ್ಯಾಕ್ 14 (ಅಂದರೆ ಧ್ವನಿವೇಗಕ್ಕಿಂತ 14 ಪಟ್ಟು ವೇಗದ) ಸ್ಪೀಡ್‌ನಲ್ಲಿ ಸಾಗುತ್ತಿರುವ ಟಾರ್ಗೆಟ್‌ಗಳನ್ನೂ ನಾಶಪಡಿಸಬಹುದೆಂಬುದು ಈ ಸುದರ್ಶನ ಚಕ್ರದ ಹೆಗ್ಗಳಿಕೆ.

ಇದರ ಡಿಪ್ಲಾಯ್‌ಮೆಂಟ್ ಸ್ಪೀಡ್ ಕೂಡ ಅತ್ಯಂತ ಮುಖ್ಯವಾದ ಅಂಶವಾಗಿದೆ. ವ್ಯವಸ್ಥೆ ಚಲಿಸುತ್ತಿರುವಾಗ5 ನಿಮಿಷಗಳೊಳಗೆ ಇದನ್ನು ಕಾರ್ಯಸಿದ್ಧಗೊಳಿಸಲು ಸಾಧ್ಯವಿದೆ. ವ್ಯವಸ್ಥೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇದ್ದರೆ, ಕೇವಲ 35 ಸೆಕೆಂಡುಗಳಲ್ಲಿ ಅದು ಸಜ್ಜಾಗಿ ದಾಳಿಗೆ ಪ್ರತಿಕ್ರಿಯಿಸಬಲ್ಲದು. ಇದು ಭಾರತೀಯ ಸೇನೆಯ ತ್ವರಿತ ಪ್ರತಿಕ್ರಿಯಾಶಕ್ತಿಯನ್ನು ಹೆಚ್ಚಿಸುವ ಮಹತ್ವದ ಅಂಶವಾಗಿದೆ.

ವ್ಯವಸ್ಥೆಯನ್ನು ಹೆವಿ ಡ್ಯೂಟಿ ಮಿಲಿಟರಿ ಟ್ರಕ್‌ಗಳ ಮೂಲಕ ನಿರಂತರವಾಗಿ ಚಲಾಯಿಸಲಾಗುತ್ತದೆ. ಸಾಮಾನ್ಯ ರಸ್ತೆಗಳ ಮೇಲೆ ಇದು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು ಹಾಗೂ ಇತರ ಸ್ಥಳಗಳಲ್ಲಿ 25 ಕಿಲೋಮೀಟರ್ ವೇಗದಲ್ಲಿ ಸಾಗಬಹುದು. ಇನ್ನೂ ಒಂದು ಪ್ರಮುಖ ವೈಶಿಷ್ಟ್ಯವೆಂದರೆ, ವ್ಯವಸ್ಥೆಯು ಎಲೆಕ್ಟ್ರಾನಿಕ್ ಜಾಮಿಂಗ್ ಅನ್ನು ಪ್ರತಿರೋಧಿಸಿ ಕೆಲಸ ಮಾಡಲು ಸಮರ್ಥವಾಗಿದೆ.

ಹೀಗಾಗಿ, ಎಲ್ಲ ವೈಶಿಷ್ಟ್ಯಗಳೊಂದಿಗೆವೇಗ, ನಿಖರತೆ, ಬಲ ಮತ್ತು ತಾಂತ್ರಿಕ ಮುನ್ನಡೆಯೊಂದಿಗೆ "ಸುದರ್ಶನ ಚಕ್ರ" ಅಥವಾ ಎಸ್-400 ಟ್ರಯಂಫ್ ಎಯರ್ ಡಿಫೆನ್ಸ್ ಸಿಸ್ಟಮ್ ಒಂದು ಅತ್ಯಾಧುನಿಕ ಹಾಗೂ ಶಕ್ತಿಶಾಲಿಯಾದ ಯಂತ್ರವಾಗಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಹೆಮ್ಮೆ ತಂದಿರುವದು ಸ್ಪಷ್ಟವಾಗಿದೆ.

ಇನ್ನು ಮುಂದೆ ಉದ್ಭವವಾಗುವ ಪ್ರಮುಖ ಪ್ರಶ್ನೆಯೆಂದರೆಇಷ್ಟೆಲ್ಲಾ ಕಾರ್ಯಗಳನ್ನು ಮಾಡಲು ಈ ಎಸ್-400 ಟ್ರಯಂಫ್ ವ್ಯವಸ್ಥೆಗೆ ಹೇಗೆ ಸಾಧ್ಯವಾಗುತ್ತಿದೆ?

ಅದಕ್ಕಾಗಿ ಮೊದಲು ಸಿಸ್ಟಮ್‌ನ ಪ್ರಮುಖ ಘಟಕಗಳನ್ನು (components) ತಿಳಿದುಕೊಳ್ಳೋಣ. ಎಸ್-400 ಟ್ರಯಂಫ್ ವ್ಯವಸ್ಥೆಯಲ್ಲಿ ಮುಖ್ಯವಾಗಿ ನಾಲ್ಕು ಪ್ರಮುಖ ಘಟಕಗಳು ಇವೆ:

1️ ಲಾಂಗ್ ರೇಂಜ್ ಸರ್ವೆಲ್ಯಾನ್ಸ್ ರಡಾರ್ ಸಿಸ್ಟಮ್

ಇದಕ್ಕೆ ಉಪಯೋಗಿಸುತ್ತಿರುವ ರಡಾರ್ ಮಾದರಿ 9ವಿನ್‌ಎಸ್6 (9VnS6E). ಇದರ ವ್ಯಾಪ್ತಿ 600 ಕಿಮೀಗಳವರೆಗೆ ಇರುತ್ತದೆ. ರಡಾರ್ ಒಂದೇ ಸಮಯದಲ್ಲಿ ಸುಮಾರು 300 ಟಾರ್ಗೆಟ್‌ಗಳನ್ನು ಪತ್ತೆಹಚ್ಚಲು ಶಕ್ತಿಯುತವಾಗಿದೆ. ಇದು ಎಲ್ಲಾ ದಿಕ್ಕುಗಳಿಂದ ಬರುವ ಅಪಾಯಗಳನ್ನು ಸಮಯಕ್ಕೆ ಮೊದಲು ಡಿಟೆಕ್ಟ್ ಮಾಡುತ್ತದೆ.

2️ ಕಮಾಂಡ್ ವಾಹನ (Command Vehicle)

ಇದು 55ಕೆಎಸ್6 (55K6E) ಎಂಬ ಹೆವಿ ಡ್ಯೂಟಿ ಟ್ರಕ್‌ನ ಮೇಲೆ ಸ್ಥಾಪಿತಗೊಂಡ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಆಗಿದೆ. ಘಟಕವೇ ಸಂಪೂರ್ಣ ವ್ಯವಸ್ಥೆಯ ನಿರ್ವಹಣಾ ಸೆಂಟರ್ ಆಗಿದ್ದು, ಎಲ್ಲಾ ಇನ್‌ಪುಟ್‌ಗಳನ್ನೂ ಸಂಯೋಜಿಸಿ ಸೂಕ್ತ ಆದೇಶಗಳನ್ನು ಇತರ ಘಟಕಗಳಿಗೆ ನೀಡುತ್ತದೆ.

3️ ಎನ್ಗೇಜ್‌ಮೆಂಟ್ ರಡಾರ್ (Engagement Radar)

ಇದು 92ಎನ್6 (92N6E) ಮಾದರಿಯ ರಡಾರ್ ಆಗಿದ್ದು, ಇದು ಒಂದು ಮಲ್ಟಿ-ಫಂಕ್ಷನಲ್ ರಡಾರ್ ಆಗಿದೆ. ಇದರ ವ್ಯಾಪ್ತಿ ಸುಮಾರು 400 ಕಿಮೀಗಳವರೆಗೆ ಇರುತ್ತದೆ. ಘಟಕ ಶತ್ರು ಟಾರ್ಗೆಟ್‌ಗಳನ್ನು ಲಾಕ್ ಮಾಡಿ ನಿರ್ದಿಷ್ಟವಾಗಿ ಯಾವ ಮಿಸೈಲಿನಿಂದ ದಾಳಿ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ.

4️ ಲಾಂಚ್ ವೆಹಿಕಲ್ (Launch Vehicle)

ಇದು ವ್ಯವಸ್ಥೆಯ ಅತಿ ಮುಖ್ಯವಾದ ಭಾಗವಾಗಿದೆ. ಇದರಲ್ಲಿ 5ಪಿ85ಟಿಇ (5P85TE) ಎಂಬ ಮಿಸೈಲ್ ಲಾಂಚರ್‌ಗಳು 10x10 ಹೆವಿ ಡ್ಯೂಟಿ ಮಿಲಿಟರಿ ಟ್ರಕ್‌ಗಳ ಮೇಲೆ ಸ್ಥಾಪಿಸಲಾಗಿವೆ. ಪ್ರತಿಯೊಂದು ಲಾಂಚ್ ವೆಹಿಕಲ್‌ನ ಮೇಲೆ ನಾಲ್ಕು ಮಿಸೈಲ್ ಲಾಂಚರ್‌ಗಳು ಇರುತ್ತವೆ. ಇವುಗಳಲ್ಲಿ ವಿಭಿನ್ನ ಬಗೆಗಿನ ಮಿಸೈಲ್‌ಗಳನ್ನು ಬಳಸಬಹುದು. ಮುಖ್ಯವಾಗಿ ನಾಲ್ಕು ವಿಭಿನ್ನ ತರಹದ ಮಿಸೈಲ್‌ಗಳು ವ್ಯವಸ್ಥೆಯಲ್ಲಿ ಬಳಸಲಾಗುತ್ತವೆಇದು ಕಡಿಮೆ ದೂರ, ಮಧ್ಯಮ ದೂರ ಮತ್ತು ದೀರ್ಘ ದೂರದ ಗುರಿಗಳಿಗೆ ಮಿಸೈಲ್ ಗಳನ್ನು ಹಾರಿಸಲು ನೆರವಾಗುತ್ತದೆ.

ರೀತಿಯಾಗಿ, ನಾಲ್ಕು ಪ್ರಮುಖ ಘಟಕಗಳ ಸಹಕಾರದಿಂದಾಗಿ ಎಸ್-400 ಟ್ರಯಂಫ್ ವ್ಯವಸ್ಥೆ ಇಷ್ಟೊಂದು ಶಕ್ತಿಶಾಲಿ ಹಾಗೂ ವಿಶ್ವಾಸಾರ್ಹವಾದ ಎಯರ್ ಡಿಫೆನ್ಸ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸುತ್ತಿದೆ.

ಸುಮಾರು 40 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ 996 (9A96E) ಎಂಬ ರೀತಿಯ ಶಾರ್ಟ್ ರೇಂಜ್ ಮಿಸೈಲ್‌ಗಳು, ಹಾಗೆಯೇ 120 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ 9962 (9A96E2) ಮಾದರಿಯ ಮಿಡಿಯಂ ರೇಂಜ್ ಮಿಸೈಲ್‌ಗಳು, ಮತ್ತು 250 ಕಿಲೋಮೀಟರ್ ವ್ಯಾಪ್ತಿಯ 48ಎನ್6 (48N6) ಮಾದರಿಯ ಲಾಂಗ್ ರೇಂಜ್ ಮಿಸೈಲ್‌ಗಳು ಹಾಗೂ 400 ಕಿಲೋಮೀಟರ್ ವ್ಯಾಪ್ತಿಯ ವೆರಿ ಲಾಂಗ್ ರೇಂಜ್ ಮಿಸೈಲ್‌ಗಳುಇವುಗಳನ್ನೆಲ್ಲಾ ಎಸ್-400 ವ್ಯವಸ್ಥೆಯಿಂದ ಲಾಂಚ್ ಮಾಡಬಹುದು.

ಆದರೆ, ನಾವು ವ್ಯವಸ್ಥೆಯನ್ನು ರಷ್ಯೆಯಿಂದ ಖರೀದಿಸಿದಾಗ, ಎಲ್ಲ ತರದ ಮಿಸೈಲ್‌ಗಳನ್ನೂ ಭಾರತ ಖರೀದಿಸಿಲ್ಲ. ಏಕೆಂದರೆ, ಭಾರತವು ಸ್ವತಃ ತಾವು ಅಭಿವೃದ್ಧಿಪಡಿಸಿರುವ ಕೆಲ ಮಿಸೈಲ್‌ಗಳನ್ನು ಹೊಂದಿದೆ. ಅವು ವ್ಯವಸ್ಥೆಯೊಂದಿಗೇ ಬಳಸಲು ಹೊಂದಾಣಿಕೆಯಾಗಿರುವುದರಿಂದ, ರಷ್ಯಾದ ಮಿಸೈಲ್‌ಗಳನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿಲ್ಲ.

ಇದು ಭಾರತೀಯ ತಾಂತ್ರಿಕ ಸ್ವಾವಲಂಬಿತ್ವದ ಮತ್ತೊಂದು ಉದಾಹರಣೆಯಾಗಿದೆ.

ಅದೇನೇ ಆಗಲಿ, ಇದುವರೆಗೆ ನೋಡಿದಂತೆ ಎಲ್ಲವನ್ನೂ ಸೇರಿಸಿಕೊಂಡದ್ದೇ ಒಂದು ಸಂಪೂರ್ಣ ಎಯರ್ ಡಿಫೆನ್ಸ್ ಸಿಸ್ಟಂ ಆಗಿದೆ.

ಈಗ, ಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಮೊದಲು ಬರುವದು ನಾನು ಹಿಂದೆ ವಿವರಿಸಿದ ಲಾಂಗ್ ರೇಂಜ್ ಸರ್ವೆಲ್ಯಾನ್ಸ್ ರಡಾರ್ ಸಿಸ್ಟಂ. ಇದರ ಕೆಲಸವೆಂದರೆ 600 ಕಿಲೋಮೀಟರ್ ವ್ಯಾಪ್ತಿಯೊಳಗಿನ ಎಲ್ಲಾ ಟಾರ್ಗೆಟ್‌ಗಳನ್ನು ಡಿಟೆಕ್ಟ್ ಮಾಡುವುದು. ಆದರೆ ಡಿಟೆಕ್ಷನ್‌ನಲ್ಲಿ ಸಾಮಾನ್ಯ ಕಮರ್ಷಿಯಲ್ ಏರ್‌ಕ್ರಾಫ್ಟ್‌ಗಳು, ನಮ್ಮದೇ ದೇಶದ ಎರ್‌ಫೋರ್ಸ್ ವಿಮಾನಗಳು, ಶತ್ರು ರಾಷ್ಟ್ರದ ಮಿಸೈಲ್‌ಗಳು, ಡ್ರೋನ್‌ಗಳು, ಇತ್ಯಾದಿ ಇರುತ್ತವೆ. ಇವುಗಳಲ್ಲಿ ಯಾವುದು ಅಪಾಯಕಾರಿ, ಯಾವುದು ಅಪಾಯಕರವಲ್ಲ ಎಂಬುದನ್ನು ಗುರುತಿಸುವುದು ಅತಿ ಮುಖ್ಯ. ಇದಕ್ಕಾಗಿ, ನಾನು ಹಿಂದೆ ಹೇಳಿದ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಂ ಬಳಸಲಾಗುತ್ತದೆ. ಘಟಕವು ಎಲ್ಲಾ ಡೇಟಾವನ್ನು ಸಂಗ್ರಹಿಸುತ್ತದೆ - ವಿಶ್ಲೇಷಣೆ ಮಾಡುತ್ತದೆ - ಯಾವ ಟಾರ್ಗೆಟ್‌ಗಳು ಅಪಾಯಕಾರಿಯಾಗಿವೆ ಎಂಬುದನ್ನು ಗುರುತಿಸುತ್ತದೆ ಮತ್ತು ಯಾವ ಟಾರ್ಗೆಟ್‌ಗಳನ್ನು ಎನ್‌ಗೇಜ್ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತದೆ

ತೀರ್ಮಾನ ಆದ ಬಳಿಕ, ನಮ್ಮ ಮಿಸೈಲ್ ಲಾಂಚ್ ವೆಹಿಕಲ್‌ಗಳು ಅಥವಾ ಲಾಂಚರ್‌ಗಳು ಸ್ವತಃ ಆಕ್ಟಿವೇಟ್ ಆಗುತ್ತವೆ. ಪ್ರತಿಯೊಂದು ಟಾರ್ಗೆಟ್‌ಗೂ ಸೂಕ್ತವಾದ ಮಿಸೈಲ್ ಆಯ್ಕೆ ಮಾಡುತ್ತದೆ, ಅಂದರೆ ಶಾರ್ಟ್ ರೇಂಜ್ ಟಾರ್ಗೆಟ್‌ಗೆ ಶಾರ್ಟ್ ರೇಂಜ್ ಮಿಸೈಲ್, ಲಾಂಗ್ ರೇಂಜ್ ಟಾರ್ಗೆಟ್‌ಗೆ ಲಾಂಗ್ ರೇಂಜ್ ಮಿಸೈಲ್. ನಂತರ, ಎನ್‌ಗೇಜ್‌ಮೆಂಟ್ ರಡಾರ್ ಘಟಕ ಕೆಲಸ ಪ್ರಾರಂಭಿಸುತ್ತದೆ. ಘಟಕವು ಮಿಸೈಲ್‌ಗಳನ್ನು ಟಾರ್ಗೆಟ್‌ವರೆಗೆ ನಿಖರವಾಗಿ ಮಾರ್ಗದರ್ಶನ ಮಾಡುತ್ತದೆ ಮತ್ತು ಹಾರಾಟದ ದಾರಿಯಲ್ಲಿ ಸರಿಯಾದ ನಿಗಾ ಮತ್ತು ನಿರ್ದೇಶನವನ್ನು ಒದಗಿಸುತ್ತದೆ.

ಎಲ್ಲಾ ಘಟಕಗಳು ರಡಾರ್, ಕಮಾಂಡ್ ಸೆಂಟರ್, ಎನ್‌ಗೇಜ್‌ಮೆಂಟ್ ಸಿಸ್ಟಂ, ಲಾಂಚರ್‌ಗಳುಪರಸ್ಪರ ಒಪ್ಪಂದದಂತೆ ಕೆಲಸ ಮಾಡುತ್ತವೆ. ಹೀಗೆ, ಎಸ್-400 ಟ್ರಯಂಫ್ ಸಿಸ್ಟಂ ಒಂದು ಸಂಪೂರ್ಣವಾಗಿ ಸಂಯೋಜಿತ ಎಯರ್ ಡಿಫೆನ್ಸ್ ಸಿಸ್ಟಂ ಆಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಅದರಂತೆ ಮತ್ತೊಂದು ಮಹತ್ವದ ವಿಷಯವನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ "ಸುದರ್ಶನ್ ಚಕ್ರ" ಎಂಬ ಹೆಸರಿನಲ್ಲಿ ಕರೆಯಲಾಗುತ್ತಿರುವ ಎಸ್-400 ವ್ಯವಸ್ಥೆ "ಒಂದು ಸ್ಕ್ವಾಡ್ರನ್" ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಕ್ವಾಡ್ರನ್ ಎಂದರೆ ಅದರಲ್ಲಿ ಎರಡು ಬ್ಯಾಟರಿಗಳು ಇರುತ್ತದೆ. ಬ್ಯಾಟರಿ ಎಂಬುದು ಎಂದರೆ ಒಂದು ಫೈರಿಂಗ್ ಯೂನಿಟ್ ಆಗಿದೆ. ಒಂದು ಬ್ಯಾಟರಿಯಲ್ಲಿರುವ ಮುಖ್ಯ ಘಟಕಗಳೆಂದರೆ ನಾನು ಹಿಂದೆ ವಿವರಿಸಿದಂತೆ ಆರು ಲಾಂಚ್ ವೆಹಿಕಲ್‌ಗಳು, ಅವುಗಳನ್ನು ಬೆಂಬಲಿಸುವ ರಡಾರ್ ವ್ಯವಸ್ಥೆಗಳು, ಕಮಾಂಡ್ ಮತ್ತು ಕಂಟ್ರೋಲ್ ಯೂನಿಟ್. ಎಲ್ಲವನ್ನು ಸೇರಿಸಿಕೊಂಡಾಗ ಅದನ್ನು ಒಂದು ಬ್ಯಾಟರಿ ಎನ್ನುತ್ತಾರೆ. ರೀತಿ ಎರಡು ಬ್ಯಾಟರಿಗಳು ಸೇರಿದಾಗ ಅದು ಒಂದು ಸ್ಕ್ವಾಡ್ರನ್ ಆಗುತ್ತದೆ. ಭಾರತವು ರೀತಿಯ ಐದು ಸ್ಕ್ವಾಡ್ರನ್‌ಗಳನ್ನು ರಷ್ಯಾದಿಂದ ಖರೀದಿಸಿದೆ. ಈ ಖರೀದಿಯ ಒಟ್ಟು ಮೊತ್ತ ಸುಮಾರು 5.4 ಬಿಲಿಯನ್ ಡಾಲರ್, ಅಂದರೆ ಸುಮಾರು ₹45,000 ಕೋಟಿ ರೂಪಾಯಿಗಳಷ್ಟಿದೆ. ಐದು ಸ್ಕ್ವಾಡ್ರನ್‌ಗಳಲ್ಲಿ ಈಗಾಗಲೇ ಮೂರು ಸ್ಕ್ವಾಡ್ರನ್‌ಗಳು ಭಾರತಕ್ಕೆ ಬಂದಿವೆ ಮತ್ತು ಸೈನ್ಯಕ್ಕೆ ಸೇರ್ಪಡೆಯಾಗಿವೆ. ಇನ್ನುಳಿದ ಎರಡು ಸ್ಕ್ವಾಡ್ರನ್‌ಗಳು ಬಾಕಿಯಿವೆ. ಬಾಕಿ ಸ್ಕ್ವಾಡ್ರನ್‌ಗಳು 2026ರೊಳಗೆ ಭಾರತಕ್ಕೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವಾಗ, ನಾವು ಇನ್ನೊಂದು ಮಹತ್ವದ ವಿಷಯವನ್ನೂ ತಿಳಿದುಕೊಳ್ಳಬೇಕು. ಭಾರತವು ರಷ್ಯಾದಿಂದ ರೀತಿಯ ಎಸ್-400 ಟ್ರಯಂಪ್ ಏರ್ ಡಿಫೆನ್ಸ್ ಸಿಸ್ಟಂ ಖರೀದಿಸಲು ತೀರ್ಮಾನಿಸಿದ ಸಮಯವು ಸುಮಾರು 2016 ರಲ್ಲಾಗಿದೆ. ಬ್ರಿಕ್ಸ್ ಶೃಂಖಲೆಯ ಸಭೆಗಳ ಭಾಗವಾಗಿ ಕುರಿತು ಚರ್ಚೆಗಳು ಪ್ರಾರಂಭವಾಯಿತು. ನಂತರ 2018 ರಲ್ಲಿ ಭಾರತ ಮತ್ತು ರಷ್ಯಾ ಡಿಫೆನ್ಸ್ ವ್ಯವಸ್ಥೆಯ ಖರೀದಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದುವು. ಆದರೆ ಸಂದರ್ಭದಲ್ಲಿ ಅಮೇರಿಕಾದಿಂದ ತೀವ್ರ ವಿರೋಧ ಎದುರಾಯಿತು. ಅಮೆರಿಕವು ರಷ್ಯಾ ಸೇರಿದಂತೆ ಹಲವಾರು ದೇಶಗಳ ಮೇಲೆ ಸ್ಯಾಂಕ್ಷನ್‌ಗಳು ಜಾರಿಗೆ ತಂದಿತ್ತಲ್ಲದೆ, ಇತರ ರಾಷ್ಟ್ರಗಳು ರಷ್ಯಾದಿಂದ ರೀತಿಯ ಸಾಫ್ಟ್‌ವೇರ್ ಅಥವಾ ಮಿಲಿಟರಿ ಉಪಕರಣಗಳನ್ನು ಖರೀದಿಸಬಾರದು ಎಂದು ಎಚ್ಚರಿಸುತ್ತಿತ್ತು. ಕ್ಯಾಟ್ಸಾ (CAATSA) ಎಂಬ ಅಮೆರಿಕದ ನಿಯಮದ ಅಡಿಯಲ್ಲಿ, ಭಾರತ ವ್ಯವಹಾರವನ್ನು ಮುಂದುವರಿಸಿದರೆ, ಅಮೆರಿಕ ಭಾರತ ಮೇಲೂ ಸಾಂಕ್ಷನ್ ಜಾರಿಗೆ ತರುತ್ತದೆ ಎಂಬ ಧಮಕಿ ನೀಡಿತು.

ಅಮೆರಿಕದ ಕಠಿಣ ನಿಲುವಿನ ಹಿಂದೆ ಕೆಲ ಕಾರಣಗಳಿವೆ:

  • ಅವರು ಭಾರತಕ್ಕೆ ತಮ್ಮದೇ ಆದ THAAD (Terminal High Altitude Area Defense) ಎಂಬ ಡಿಫೆನ್ಸ್ ಸಿಸ್ಟಂ ಅನ್ನು ಕೊಡಲು ಇಚ್ಛಿಸುತ್ತಿದ್ದರು.
  • ಎಸ್-400 ತನ್ನ ಸ್ಟೆಲ್ತ್ ಫೈಟರ್ ಎರ್‌ಕ್ರಾಫ್ಟ್‌ಗಳನ್ನೂ ಪತ್ತೆಹಚ್ಚಿ ನಾಶಮಾಡಬಲ್ಲದು ಎಂಬ ಕಾರಣದಿಂದ, ಇದು ಅಮೆರಿಕದ ತಂತ್ರಜ್ಞಾನಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬ ಅಭಿಪ್ರಾಯ ಎಲ್ಲರಲ್ಲಿ ಮೂಡಿಬಂದಿತ್ತು.
  • ಅನೇಕ ರಾಷ್ಟ್ರಗಳು ರಷ್ಯಾದ ಸುಧಾರಿತ ತಂತ್ರಜ್ಞಾನವನ್ನು ಸ್ವೀಕರಿಸುತ್ತಿದ್ದರಿಂದ ಅಮೆರಿಕ ತಂತ್ರಜ್ಞಾನ-ಮೆಟ್ಟಿಲಿನಲ್ಲಿ ಹಿಂದಕ್ಕೆ ಸರಿಯುವ ಭೀತಿಯಿಂದ ಇದನ್ನು ತಡೆಯಲು ಮುಂದಾಯಿತು.

ಆದರೂ ಭಾರತ ತನ್ನ ದೃಢ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಎಷ್ಟೇ ಧಮಕಿ ಬಂದರೂ ಭಾರತವು ತನ್ನ ನಿರ್ಧಾರದಲ್ಲಿ ಅಡಗದೆ, ಎಸ್-400 ಖರೀದಿಯನ್ನು ಮುಂದುವರೆಸಿತು. ಕೊನೆಗೆ, ಅಮೆರಿಕ ಒಂದು ಹೆಜ್ಜೆ ಹಿಂದಕ್ಕೆ ಹಾಕಬೇಕಾಯಿತು. 2022 ಜನವರಿಯಲ್ಲಿ, ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ವಿಶೇಷ CAATSA (AMENDMENT) ಅನ್ನು ಮಂಡಿಸಲಾಯಿತು. ಇದರಡಿಯಲ್ಲಿ ಭಾರತಕ್ಕೆ ಒಂದು ವೇವರ್ (ರಿಯಾಯಿತಿ) ನೀಡಲಾಗಿದ್ದು, ಭಾರತವು ರಷ್ಯಾದಿಂದ ಎಸ್-400 ವ್ಯವಸ್ಥೆಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ಭಾರತ ಯಾವುದೇ ಅಡಚಣೆ ಇಲ್ಲದೆ ವ್ಯವಸ್ಥೆಯನ್ನು ಖರೀದಿಸಿತು. ಹಾಗೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಭಾರತ ತನ್ನ ಸೈನಿಕ ಶಕ್ತಿಯನ್ನು ವಿಶ್ವದ ಮುಂದೆ ಸ್ಪಷ್ಟವಾಗಿ ಪ್ರದರ್ಶಿಸಲು ಸಾಧ್ಯವಾಯಿತು.

 ಸುದರ್ಶನ ಚಕ್ರಎಂಬ ಹೆಸರಿನಲ್ಲಿ ಪರಿಚಿತವಾಗಿರುವ ಎಸ್-400 ಟ್ರಯಂಪ್ ಏರ್ ಡಿಫೆನ್ಸ್ ಸಿಸ್ಟಂ ಎಂಬುದೇನು, ಅದರ ಭಾಗಗಳು ಯಾವುವು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಮತ್ತು ಇದು ಭಾರತದಲ್ಲಿ ಹೇಗೆ ಅಳವಡಿಸಲಾಯಿತು ಎಂಬ ವಿವರಗಳು ನಿಮಗೆ ಈಗ ಸ್ಪಷ್ಟವಾಗಿದೆ ಎಂಬ ನಂಬಿಕೆ ನನಗೆ ಇದೆ.

What's Your Reaction?

like

dislike

love

funny

angry

sad

wow