ಅಮೆರಿಕದ ಆಯುಧಗಳು - ಇಸ್ರೇಲಿನ ಕಾದಾಟ

ಎರಡನೇ ವಿಶ್ವಯುದ್ಧದ ನಂತರದಿಂದ 2024ರ ಕೊನೆಯವರೆಗೂ ಸುಮಾರು 310 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ಅಮೇರಿಕ ಇಸ್ರೇಲಿಗೆ ನೀಡಿದೆ. ಇದರಲ್ಲಿ ಸುಮಾರು 52 ಬಿಲಿಯನ್ ಡಾಲರ್ ನಗದು ಆರ್ಥಿಕ ಸಹಾಯವಾಗಿದ್ದು, ಉಳಿದ ಧನಸಹಾಯ ಮಿಲಿಟರಿ ಅಗತ್ಯಗಳಿಗೆ ಮೀಸಲಿಡಲಾಗಿದೆ.

Jun 24, 2025 - 22:06
Jun 24, 2025 - 22:07
 0  31
ಅಮೆರಿಕದ ಆಯುಧಗಳು - ಇಸ್ರೇಲಿನ ಕಾದಾಟ

ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ತೀವ್ರ ಸಮಸ್ಯೆಗಳು ದಿನದಿಂದ ದಿನಕ್ಕೆ ಮತ್ತಷ್ಟು ಗಂಭೀರವಾಗುತ್ತಿರುವ ಸುದ್ದಿಗಳಾಗಿವೆ ಈಗ ನಾವು ಕೇಳುತ್ತಿರುವುದು. ಇಂತಹ ಸಂದರ್ಭದಲ್ಲಿ ಇದೀಗ ಅಮೇರಿಕ ಹಸ್ತಕ್ಷೇಪದಿಂದ ಸಮಸ್ಯೆ ಮತ್ತಷ್ಟು ತೀವ್ರತೆಯನ್ನು ಪಡೆದಿರುವುದು ಗಮನಾರ್ಹವಾಗಿದೆ. ಇರಾನಿನ ಕೆಲವು ಅಣ್ವಸ್ತ್ರ ಕೇಂದ್ರಗಳ ಮೇಲೆ ಅಮೇರಿಕನ್ ಸೇನೆ ನೇರವಾಗಿ ಬಾಂಬ್ ದಾಳಿ ನಡೆಸಿದೆ. ಪ್ರತೀಕಾರವಾಗಿ ಕತಾರಿನಲ್ಲಿರುವ ಅಮೇರಿಕಾದ ವಾಯುನೆಲೆಯ ಮೇಲ್ ಇರಾನ್ ಮಿಸೈಲ್ ಧಾಳಿ ನಡೆಸಿದೆ. ಇದೀಗ ಯುದ್ಧವಿರಾಮ ಎಂಬ ನಾಟಕವೂ ಪ್ರಾರಂಭವಾಗಿದೆ.

ಇಸ್ರೇಲ್ – ಇರಾನ್ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿಗೆ, "ಇರಾನ್ನು ಆಕ್ರಮಣ ಮಾಡಬೇಡಿ" ಎಂದು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ, ಸಮಸ್ಯೆಯನ್ನು ಚರ್ಚೆಯ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು, ಇದು ದೊಡ್ಡ ಯುದ್ಧದ ಸ್ಥಿತಿಗೆ ತರುವಂತಾಗಬಾರದೆಂದು ಹೇಳಿದ್ದರು. ಆದರೆ, ಅದೇ ಡೊನಾಲ್ಡ್ ಟ್ರಂಪ್ ನಂತರ ಅಮೇರಿಕದ ಸೇನೆಗೆ ಇರಾನಿನ ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ ನಡೆಸಲು ಅನುಮತಿ ನೀಡಿದದ್ದನ್ನು ಕಾಣಬಹುದು.

ಅಮೇರಿಕದಿಂದ ಇಂತಹ ಒಂದು ಕ್ರಮ ತೆಗೆದುಕೊಳ್ಳುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಸಮಸ್ಯೆ ಇತರ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇದೆ. ಅಮೇರಿಕದ ಸ್ವಂತ ಭದ್ರತೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಮತ್ತು ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಎಲ್ಲಾ ಕಾರಣಗಳಿಂದ, ವಿಶ್ವ ಶಾಂತಿಯ ಮೇಲೆಯೇ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಎಲ್ಲರೂ ಅರಿತಿರಬೇಕಾಗುತ್ತದೆ.

ಅಂತಹ ದೊಡ್ಡ ಅಪಾಯವೊಂದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಅಮೇರಿಕ ಸಮಸ್ಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಏಕೆ? ಇಸ್ರೇಲಿಗೆ ಸಹಾಯ ಮಾಡುವುದಕ್ಕಾಗಿ ಅಮೇರಿಕ ಯಾಕೆ ಮುಂದಾಗಿದೆ? ಇಸ್ರೇಲ್‌ಗೆ ಸಮಸ್ಯೆ ಉಂಟಾಗುವ ಸಮಯದಲ್ಲಿ, ಅವರಿಗೆ ಸಹಾಯ ಮಾಡಲು ಅಮೇರಿಕ ಮುಂದಾಗುವುದು 100 ಶೇಖಡಾ ಖಚಿತವಿರುವ ವಿಷಯ. ಇಸ್ರೇಲಿನಲ್ಲಿ ಏನೇ ಸಮಸ್ಯೆ ಉಂಟಾದರೂ ಅಮೇರಿಕ ಅದನ್ನು ತಮ್ಮದೇ ಆದ ದೇಶೀಯ ಸಮಸ್ಯೆಯಂತೆ ಪರಿಗಣಿಸಿ ಸಹಾಯ ಮಾಡಲು ಮುಂದಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇಸ್ರೇಲ್ ಅಮೇರಿಕದ 51ನೇ ರಾಜ್ಯವೋ ಎಂಬ ಅನುಮಾನ ಪಡಬೇಕಾಗುತ್ತದೆ, ಇಷ್ಟು ಮಟ್ಟಿಗೆ ಅಮೇರಿಕ ಸದಾ ಇಸ್ರೇಲಿಗೆ ಬೆಂಬಲ ನೀಡುತ್ತಿರುತ್ತದೆ. ಅಮೇರಿಕದ ಅಧ್ಯಕ್ಷರು ರಿಪಬ್ಲಿಕನ್ ಪಕ್ಷದವರಾಗಿರಲಿ ಅಥವಾ ಡೆಮಾಕ್ರಾಟಿಕ್ ಪಕ್ಷದವರಾಗಿರಲಿ, ಎಲ್ಲರೂ ಸದಾ ಪ್ರೋ-ಇಸ್ರೇಲ್ ನಿಲುವುಗಳನ್ನು ತೆಗೆದುಕೊಳ್ಳುವವರಾಗಿದ್ದಾರೆ.

ಹಾಗಾದರೆ ಯಾವ ಕಾರಣಕ್ಕಾಗಿ ಪ್ರತಿಸಾರಿ ಇಸ್ರೇಲಿಗೆ ಇಷ್ಟು ಬಲವಾದ ಬೆಂಬಲ ಅಮೇರಿಕದಿಂದ ಸಿಗುತ್ತದೆ? ಅಮೇರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧದ ಇತಿಹಾಸವೇನು? ಎಂಬುದನ್ನೇ ಲೇಖನದಲ್ಲಿ ವಿವರಿಸುತ್ತೇನೆ.

ಎರಡನೇ ವಿಶ್ವಯುದ್ಧದ ನಂತರವೇ ಇಸ್ರೇಲ್ ಎಂಬ ರಾಷ್ಟ್ರ ಸ್ಥಾಪಿತವಾಯಿತು. ಸಮಯದಿಂದ ಇಸ್ರೇಲ್ ಅನೇಕ ಬಗೆಯ ಸಂಘರ್ಷಗಳಿಗೆ ಒಳಗಾಗುತ್ತದೆ. ಇವುಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಅಮೇರಿಕ ಮಿಲಿಟರಿ ಸಹಾಯವನ್ನು ಇಸ್ರೇಲಿಗೆ ನೀಡುತ್ತಾ ಬಂದಿರುವುದನ್ನು ನಾವು ಕಾಣಬಹುದು.

ಉದಾಹರಣೆಗೆ, 1973 ರಲ್ಲಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದ್ದಾಗ, ಅಮೇರಿಕ ಟ್ಯಾಂಕ್‌ಗಳು, ಶಸ್ತ್ರಾಸ್ತ್ರಗಳು ಮುಂತಾದವುಗಳನ್ನು ನೀಡಿ ಇಸ್ರೇಲಿಗೆ ನೆರವಾಯಿತು. ರೀತಿಯ ನೆರವು ಹಲವು ಸಂದರ್ಭಗಳಲ್ಲಿ ಅವರಿಂದ ಇಸ್ರೇಲಿಗೆ ಲಭಿಸಿದೆ. ಮಿಲಿಟರಿ ಸಹಾಯವಷ್ಟೇ ಅಲ್ಲದೆ ಆರ್ಥಿಕ ಸಹಾಯವೂ ಕೂಡ ಅಮೇರಿಕದಿಂದ ಇಸ್ರೇಲಿಗೆ ಲಭಿಸುತ್ತಿದೆ.

ಎರಡನೇ ವಿಶ್ವಯುದ್ಧದ ನಂತರದಿಂದ 2024 ಕೊನೆಯವರೆಗೂ ಸುಮಾರು 310 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ಅಮೇರಿಕ ಇಸ್ರೇಲಿಗೆ ನೀಡಿದೆ. ಇದರಲ್ಲಿ ಸುಮಾರು 52 ಬಿಲಿಯನ್ ಡಾಲರ್ ನಗದು ಆರ್ಥಿಕ ಸಹಾಯವಾಗಿದ್ದು, ಉಳಿದ ಧನಸಹಾಯ ಮಿಲಿಟರಿ ಅಗತ್ಯಗಳಿಗೆ ಮೀಸಲಿಡಲಾಗಿದೆ.

ಒಂದು ಸ್ಪಷ್ಟ ಉದಾಹರಣೆಗಾಗಿ, 2016 ರಲ್ಲಿ ಬರಾಕ್ ಒಬಾಮಾ ಅಮೇರಿಕ ಅಧ್ಯಕ್ಷರಾಗಿದ್ದ ವೇಳೆ, ಮುಂದಿನ 10 ವರ್ಷಗಳ ಕಾಲ ಇಸ್ರೇಲಿಗೆ ಮಿಲಿಟರಿ ಸಹಾಯಕ್ಕಾಗಿ 38 ಬಿಲಿಯನ್ ಡಾಲರ್ ಸಹಾಯದ ಭರವಸೆ ನೀಡಲಾಯಿತು. ಇದರ ಅಡಿಯಲ್ಲಿ ಪ್ರತಿವರ್ಷ 3.8 ಬಿಲಿಯನ್ ಡಾಲರ್ ಮೌಲ್ಯದ ಧನಸಹಾಯವನ್ನು ಅಮೇರಿಕ ಇಸ್ರೇಲಿಗೆ ನೀಡುತ್ತದೆ. ಇದು ಇಸ್ರೇಲಿನ ಒಟ್ಟು ರಕ್ಷಣಾ ಬಜೆಟ್‌ನ ಸುಮಾರು 16 ಶತಮಾನದಷ್ಟಾಗುತ್ತದೆ.

ಇಷ್ಟು ಭಾರಿ ಮೊತ್ತದ ಆರ್ಥಿಕ ಸಹಾಯವನ್ನು ಅಮೇರಿಕ ತನ್ನ ಜನತೆ ಪಾವತಿಸುವ ತೆರಿಗೆಯ ಹಣದಿಂದಲೇ ನೀಡುತ್ತಿದೆ. ಸಹಾಯ ಮಿಲಿಟರಿ ಕ್ಷೇತ್ರಕ್ಕೂ, ಇತರೆ ತಂತ್ರಜ್ಞಾನ ಕ್ಷೇತ್ರಗಳಿಗೂ ಸಂಬಂಧಿಸಿದೆ. ಇಸ್ರೇಲ್ ಮತ್ತು ಅಮೇರಿಕ ಎರಡೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಸ್ಪರ ಹಂಚಿಕೊಂಡು ಅಭಿವೃದ್ಧಿ ನಡೆಸುತ್ತಿವೆ.

ಇನ್ನು ಅಮೇರಿಕ ನೀಡುವ ಮತ್ತೊಂದು ಮುಖ್ಯವಾದ ಸಹಾಯವೆಂದರೆ ರಾಜಕೀಯ ಬೆಂಬಲ. ಇತ್ತೀಚಿನ ವರ್ಷಗಳಲ್ಲಿ ಅಮೇರಿಕ ಇಸ್ರೇಲಿಗೆ ರಾಜಕೀಯವಾಗಿ ಅತ್ಯಂತ ಬಲವಾದ ಬೆಂಬಲ ನೀಡುತ್ತಾ ಬಂದಿರುವುದು ಸ್ಪಷ್ಟವಾಗಿದೆ. ಬೆಂಬಲದ ಬಹುಪಾಲು ಐಕ್ಯರಾಷ್ಟ್ರ ಸಂಘಟನೆಯೊಳಗಿನ ನಿರ್ಣಯಗಳಲ್ಲಿ ವ್ಯಕ್ತವಾಗುತ್ತದೆ.

ಯುಎನ್‌ನ ಸೆಕ್ಯುರಿಟಿ ಕೌನ್ಸಿಲ್‌ನ ಐದು ಶಾಶ್ವತ ಸದಸ್ಯರಲ್ಲಿ ಅಮೇರಿಕವೂ ಒಂದಾಗಿದೆ. ದೇಶದ ಕೈಯಲ್ಲಿವೀಟೋ ಪವರ್ಎಂಬ ಅತ್ಯಂತ ಪ್ರಭಾವಶಾಲಿ ಅಧಿಕಾರವಿದೆ. ಇತಿಹಾಸದಲ್ಲಿ ಈಗಾಗಲೇ ಸುಮಾರು ನೂರಕ್ಕೂ ಅಧಿಕ ಬಾರಿ ಅಮೇರಿಕ ವೀಟೋ ಅಧಿಕಾರವನ್ನು ಬಳಸಿರುವುದು ದಾಖಲಾಗಿದೆ. ಅದರಲ್ಲಿ 49 ಬಾರಿ ಇಸ್ರೇಲಿಗೆ ಅನುಕೂಲವಾಗುವಂತೆ ಅಮೇರಿಕ ವೀಟೋ ಬಳಸಿರುವುದನ್ನು ನಾವು ಕಾಣಬಹುದು.

ಇಸ್ರೇಲಿನಲ್ಲಿ ನಡೆಯುತ್ತಿರುವ ಮಾನವ ಹಕ್ಕು ಲಂಘನೆಗಳ ವಿರುದ್ಧ ಯುಎನ್‌ ನಿರ್ಣಯಗಳು (ರೆಸೊಲ್ಯೂಷನ್‌ಗಳು) ಮುಂದೆ ಬಂದಾಗ, ಅಥವಾ ಇಸ್ರೇಲ್-ಪ್ಯಾಲೆಸ್ಟೈನ್ ನಡುವೆ ನಡೆಯುವ ಸಂಘರ್ಷಗಳಿಗೆ ಸಂಬಂಧಿಸಿದಂತೆ ಕದನವಿರಾಮ (ceasefire) ಕುರಿತ ನಿರ್ಣಯಗಳು ಯುಎನ್‌ನಲ್ಲಿ ಚರ್ಚೆಗೆ ಬರುತ್ತಿರುವಾಗ, ಅಮೇರಿಕ ಇವುಗಳನ್ನು ಬಹುತೇಕ ಸಮಯಗಳಲ್ಲಿ ಏಕಾಂಗಿಯಾಗಿ ವಿರೋಧಿಸಿ ಇಸ್ರೇಲಿಗೆ ಬೆಂಬಲ ನೀಡಿದೆ.

ಹೀಗಾಗಿ, ಆರ್ಥಿಕ, ಸೈನಿಕ, ಮತ್ತು ರಾಜಕೀಯ ಮಟ್ಟದಲ್ಲಿ ಇಸ್ರೇಲಿಗೆ ಅಮೇರಿಕದಿಂದ ಭಾರೀ ಬೆಂಬಲ ದೊರೆಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು.

ಹಾಗಾಗಿ ಎಲ್ಲರೂ ಕೇಳುವ ಪ್ರಶ್ನೆಯೆಂದರೆ, ಏಕೆ ಇಸ್ರೇಲಿಗೆ ಇಷ್ಟು ಹೆಚ್ಚಿನ ಬೆಂಬಲ ಅಮೇರಿಕದಿಂದ ಸಿಗುತ್ತದೆ?
ಪ್ರಶ್ನೆಗೆ, ಅಮೇರಿಕ ಮತ್ತು ಇಸ್ರೇಲ್ ಎರಡೂ ನೀಡುವ ಉತ್ತರವೆಂದರೆ "ನಾವು ಒಂದೇ ರೀತಿಯ ಹಂಚಿಕೊಂಡ ಇತಿಹಾಸ ಹಾಗೂ ಹಂಚಿಕೊಂಡ ಮೌಲ್ಯಗಳ (shared values and history) ಭಾಗಗಳು." ಎಂಬುದು.

ಹಂಚಿಕೊಂಡ ಇತಿಹಾಸ (Shared History): ಇದಕ್ಕೆ ಕಾರಣವೆಂದರೆ, ಈ ಎರಡೂ ರಾಷ್ಟ್ರಗಳೂ ಇಮ್ಮಿಗ್ರೆಂಟ್ ರಾಷ್ಟ್ರಗಳಾಗಿವೆ.

  • ಅಮೇರಿಕ: ಯುರೋಪಿಯನ್ ಜನರು ವಲಸೆ ಬಂದ ನಂತರ ದೇಶ ನಿರ್ಮಾಣವಾಯಿತು.
  • ಇಸ್ರೇಲ್: ಜಗತ್ತಿನ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಯುರೋಪಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬದುಕುತ್ತಿದ್ದ ಯೆಹೂದಿ ಸಮುದಾಯವು ವಲಸೆ ಬಂದು ಇಸ್ರೇಲ್ ಎಂಬ ದೇಶ ನಿರ್ಮಾಣವಾಯಿತು.

ಇದರಿಂದ ಎರಡು ರಾಷ್ಟ್ರಗಳೂ ವಲಸಿಗರಿಂದ ನಿರ್ಮಿತವಾದ ದೇಶಗಳೆಂದು ಹೇಳಬಹುದು. ಆದರೆ, ಇಲ್ಲಿ ಒಂದಿಷ್ಟು ಕಟುವಾದ ರೀತಿಯಲ್ಲಿ ವಿರೋಧಿಗಳು ಹೇಳುವ ಮಾತು ಏನೆಂದರೆ ದೇಶಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಈಗಾಗಲೇ ಅಲ್ಲಿ ನೆಲಸಿದ್ದ ಜನರನ್ನು ಹತ್ತಿಕ್ಕಿದ್ದಾರೆ ಎಂಬುದು. ರೀತಿಯ ಸಾಮಾಜಿಕ ವಾಸ್ತವ್ಯವನ್ನು ಒಬ್ಬರು ಹಂಚಿಕೊಂಡ ಇತಿಹಾಸವೆಂದು ತೋರಿಸುತ್ತಾರೆ, ಇನ್ನು ಕೆಲವರು ಇದು ಸಾಮಾನ್ಯವಾದ ಅಕ್ರಮದ ಮಾದರಿಯಾಗಿತ್ತೆಂದು ಚುಚ್ಚುತ್ತಾರೆ.

ಹಂಚಿಕೊಂಡ ಮೌಲ್ಯಗಳು (Shared Values): ಎರಡು ದೇಶಗಳೂ ಪಾಶ್ಚಾತ್ಯ ಸಮಾಜದ ಭಾಗವಾಗಿ ಪರಿಗಣಿಸುತ್ತವೆ.

  • ಜನಾಧಿಪತ್ಯ: ಅಮೇರಿಕವು ಪ್ರಪಂಚದ ಪ್ರಥಮ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.
  • ಇಸ್ರೇಲ್: ಮಿಡಲ್ ಈಸ್ಟ್‌ನ ಏಕೈಕ ಸ್ಥಿರ ಪ್ರಜಾಪ್ರಭುತ್ವ ರಾಷ್ಟ್ರ.

ಈಗಂತೂ ಈ ಎರಡೂ ರಾಷ್ಟ್ರಗಳೂ ಪಾಶ್ಚಾತ್ಯ ಮೌಲ್ಯಗಳಯಥಾ: ವ್ಯಕ್ತಿಸ್ವಾತಂತ್ರ್ಯ, ಮತದಾನ ಹಕ್ಕು, ನ್ಯಾಯ ವ್ಯವಸ್ಥೆ, ಮಾನವ ಹಕ್ಕು ಇತ್ಯಾದಿಅನುಸರಣೆ ಮಾಡುವ ರಾಷ್ಟ್ರಗಳಾಗಿ ಪರಿಗಣಿಸಲಾಗುತ್ತದೆ.

ಹೀಗಾಗಿ, ಇತಿಹಾಸವೂ, ಮೌಲ್ಯಗಳೂ ಒಂದೇ ರೀತಿಯದ್ದಾಗಿರುವುದರಿಂದ, ಈ ರಾಷ್ಟ್ರಗಳ ಸಹಕಾರ ಮಟ್ಟಿಗೆ ದೃಢವಾಗಿದೆ ಎಂದು ಅಮೇರಿಕ ಮತ್ತು ಇಸ್ರೇಲ್ ವಿವರಣೆ ನೀಡುತ್ತವೆ.

ಆದರೆ, ಇಷ್ಟರಲ್ಲೇ ನಿಜವಾದ ಕಾರಣ ಮಡಗಿದಿದೆಯೇ? ಇದನ್ನು ಸ್ಪಷ್ಟವಾಗಿ ತಿಳಿಯಲು, ಅಮೇರಿಕ ಮತ್ತು ಇಸ್ರೇಲ್ ನಡುವೆ ಇರುವ ಸಂಬಂಧದ ಆತ್ಮೀಯ ಇತಿಹಾಸವನ್ನು ನಾವು ಹೆಚ್ಚು ವಿವರವಾಗಿ ಪರಿಶೀಲಿಸಬೇಕು.

ಇಲ್ಲಿ ನಾವು ಮೊದಲು ಗಮನಿಸಬೇಕಾದ ವಿಷಯವೆಂದರೆ, ಇಸ್ರೇಲ್‌ನ ರಚನೆಗೆ ಸಂಬಂಧಿಸಿದಂತೆ 1917 ರಲ್ಲಿ ಬಲ್ಫಾರ್ ಘೋಷಣಾಪತ್ರ (Balfour Declaration) ಹೊರಬರುವುದಾಗಿದೆ. ಅಂದಿನ ಸಮಯದಲ್ಲಿಯೇ ಅಮೇರಿಕನ್ ಸರ್ಕಾರ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದ್ದನ್ನು ನಾವು ಕಾಣಬಹುದು.

ಆಮೇಲೆ, ಎರಡನೇ ವಿಶ್ವಯುದ್ಧದ ನಂತರ, 1948 ರಲ್ಲಿ ಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿ ಒಂದು ರಾಷ್ಟ್ರವಾಗಿ ಸ್ಥಾಪಿತವಾಯಿತು. ಇಸ್ರೇಲ್ ಎಂಬ ರಾಷ್ಟ್ರವು ಸ್ಥಾಪನೆಯಾಗುತ್ತಿದ್ದಾಗ ಅದನ್ನು ಮೊದಲು ಅಧಿಕೃತವಾಗಿ ಅಂಗೀಕರಿಸಿದ ದೇಶವೇ ಅಮೇರಿಕ. ಘೋಷಣೆಯಾದ ಕೇವಲ 11 ನಿಮಿಷಗಳೊಳಗೆ ಅಮೇರಿಕ ಇಸ್ರೇಲನ್ನು ಅಧಿಕೃತವಾಗಿ ಗುರುತಿಸಿದ್ದನ್ನು ನಾವು ಗಮನಿಸಬಹುದು.

ಆದರೆ ರೀತಿಯ ಆರಂಭದ ಬೆಂಬಲ ಇದ್ದರೂ, ಮುಂದಿನ ಹಂತದಲ್ಲಿ ಇಸ್ರೇಲ್ ಮತ್ತು ಅಮೇರಿಕ ನಡುವೆ ಅಷ್ಟೊಂದು ಸಹಕಾರ ಇದ್ದಿರಲಿಲ್ಲ.

ಎರಡನೇ ವಿಶ್ವಯುದ್ಧದ ನಂತರ, ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಘಟನೆಯೆಂದರೆ ಶೀತಲಯುದ್ಧ (Cold War) ಆಗಿತ್ತು. ಮಿಡಿಲ್ ಈಸ್ಟ್ ಪ್ರದೇಶವನ್ನು ನೋಡಿದರೆ, ಅದು ಸೋವಿಯತ್ ಯೂನಿಯನ್ (ಯುಎಸ್ಎಸ್ಸಾರ್) ಗೆ ಭೌಗೋಳಿಕವಾಗಿ ಸಮೀಪವಾಗಿದ್ದರಿಂದ, ಅಲ್ಲಿನ ಹಲವಾರು ರಾಷ್ಟ್ರಗಳು ಬ್ಲಾಕ್‌ನತ್ತ ತಿರುಗಿದ ಒಂದು ಹಾದಿ ಕಂಡುಬರುತ್ತಿತ್ತು.

ಸ್ಥಿತಿಯಲ್ಲಿ ಮಿಡ್‌ಲ್ ಈಸ್ಟ್‌ನಲ್ಲಿ ತಮ್ಮ ದೃಢವಾದ ಸಮರ್ಥಕರು ಅಥವಾ ಮಿತ್ರ ರಾಷ್ಟ್ರಗಳು ಅಗತ್ಯವಿದೆ ಎಂಬ ನಿರ್ಧಾರಕ್ಕೆ ಅಮೇರಿಕ ಬರುತ್ತದೆ. ಹಾದಿಯಲ್ಲೇ ಅವರು ಮೊದಲಿಗೆ ಆಯ್ಕೆ ಮಾಡಿದ ರಾಷ್ಟ್ರವೇ ಸೌದಿ ಅರೇಬಿಯಾ. ಸೌದಿಯನ್ನು ತಮ್ಮ ಪಾಳೆಯದೊಳಕ್ಕೆ ತರುವಲ್ಲಿ ಅಮೇರಿಕ ಯಶಸ್ವಿಯಾಗುತ್ತದೆ.

ಸೌದಿಯ ನಂತರ, ತಮ್ಮ ಮುಂದಿನ ಪ್ರಮುಖ ಮಿತ್ರ ರಾಷ್ಟ್ರವಾಗಿ ಅಮೇರಿಕ ಇರಾನ್ ಅನ್ನು ಪರಿಗಣಿಸಲು ಆರಂಭಿಸುತ್ತದೆ. ಆದರೆ ಇರಾನಿನ ಆ ಕಾಲದ ಆಡಳಿತಗಾರರು ಅಮೇರಿಕದೊಂದಿಗೆ ಒಡನಾಡಲು ಆಸಕ್ತಿ ತೋರಿಸಲಿಲ್ಲ. ಇದನ್ನು ಬದಲಾಯಿಸಲು, 1953 ರಲ್ಲಿ ಅಮೇರಿಕ ಇರಾನಿನಲ್ಲಿ ಒಂದು ರಾಜಕೀಯ ಬದಲಾವಣೆಯ ಸಂಚು ರೂಪಿಸಿ ಕಾರ್ಯಗತಗೊಳಿಸುತ್ತದೆ. ಇದರ ಫಲವಾಗಿ, "ಷಾ" (Shah) ಎಂಬವರನ್ನು ಅಧಿಕಾರಕ್ಕೆ ತರುವ ಮೂಲಕ, ಇರಾನನ್ನು ಒಂದು ಪ್ರೋ-ಅಮೇರಿಕನ್ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡುತ್ತದೆ.

ಎಲ್ಲಾ ಘಟನೆಗಳು ಅಮೇರಿಕ ಮಿಡ್‌ಲ್ ಈಸ್ಟ್‌ನಲ್ಲಿ ತನ್ನ ಪ್ರಭಾವವನ್ನು ಹೇಗೆ ಸ್ಥಾಪಿಸಬೇಕೆಂಬ ಬದ್ಧತೆಯೊಂದಿಗೆ ನಡೆದುಕೊಂಡವು ಎಂಬುದನ್ನು ಮನಗಂಡುಕೊಳ್ಳಬೇಕು.

ಇದೇ ಸಮಯದಲ್ಲಿ, ಅಮೇರಿಕ ಮತ್ತು ಇಸ್ರೇಲ್ ನಡುವೆಯೂ ಕೆಲವು ಅಭಿಪ್ರಾಯ ಭಿನ್ನತೆಗಳು ಕಂಡುಬರುತ್ತವೆ.
ಉದಾಹರಣೆಗೆ, 1956 ರಲ್ಲಿ ನಡೆದ "ಸುಯೇಜ್ ಕಾಲುವೆ ಹಂದರ (Suez Canal Crisis)" ಯುದ್ಧದಲ್ಲಿ, ಬ್ರಿಟನ್ ಮತ್ತು ಫ್ರಾನ್ಸ್‌ನೊಂದಿಗೆ ಇಸ್ರೇಲ್ ಈಜಿಪ್ಟ್‌ ಮೇಲೆ ದಾಳಿ ಮಾಡಲು ಯೋಜನೆ ಹಾಕಿಕೊಳ್ಳುತ್ತದೆ. ಆದರೆ, ಅಮೇರಿಕ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತದೆ, ಕೂಡಲೇ ಕದನವಿರಾಮಕ್ಕೆ ಕರೆ ನೀಡುತ್ತದೆ, ಮತ್ತು ಇಸ್ರೇಲ್‌ನ ಕ್ರಮವನ್ನು ಕಠಿಣವಾಗಿ ಟೀಕಿಸುತ್ತದೆ ಎಂಬುದನ್ನು ನಾವು ಕಾಣಬಹುದು.

ಇಲ್ಲಿ ಇನ್ನೊಂದು ಪ್ರಮುಖ ಸಂಗತಿಯೆಂದರೆ, 1960 ದಶಕದಲ್ಲಿ ಇಸ್ರೇಲ್ ತನ್ನದೇ ಆದ ಅಣ್ವಸ್ತ್ರ ಯೋಜನೆಯೊಂದಿಗೆ (nuclear program) ಮುಂದುವರೆಯಲು ಪ್ರಾರಂಭಿಸಿತು. ಯೋಜನೆಗೆ ಅಮೇರಿಕ ಸಮಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಇಲ್ಲಿ ನಾವು ಗಮನಿಸಬೇಕಾದ ವಿಷಯ ಏನೆಂದರೆ, ಇಂದು ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿಯೇ, ಇಸ್ರೇಲ್ ಮತ್ತು ಅಮೇರಿಕ ಸೇರಿ ಭಾರೀ ಸಮಸ್ಯೆ ಸೃಷ್ಟಿಸುತ್ತಿರುವುದು. ಆದರೆ, ಅದೇ ರೀತಿಯಲ್ಲಿ ಇಸ್ರೇಲ್ ತಮ್ಮ ಅಣ್ವಸ್ತ್ರ ಯೋಜನೆಗೆ ಮುಂದಾಗಿದ್ದಾಗ ಕೂಡಾ, ಅಮೇರಿಕ ಅದನ್ನು ವಿರೋಧಿಸಿದ್ದ ಚರಿತ್ರಾತ್ಮಕ ಸತ್ಯವೂ ನಮಗೆ ತಿಳಿದಿರಬೇಕು. ರೀತಿಯ ಅಮೇರಿಕಾದ ದ್ವಿಮುಖ ನೀತಿಯನ್ನು ನಾವು ಗಮನಿಸಬಹುದು.

ಆದರೆ ಅಮೇರಿಕ ತನ್ನ ನಿಲುವಿನಲ್ಲಿ ಒಂದು ದೊಡ್ಡ ಬದಲಾವಣೆ ತರುವುದು 1967ರಲ್ಲಿ. ಸಮಯದಲ್ಲಿ ಅಮೇರಿಕ ವಿಯೆಟ್ನಾಮ್ ಯುದ್ಧದಲ್ಲಿ ತೊಡಗಿಸಿಕೊಂಡಿದ್ದ ಸಮಯ. ವಿಯೆಟ್ನಾಮಿನಲ್ಲಿ ಅಮೇರಿಕ ಭಾರೀ ಹಾನಿಯನ್ನು ಎದುರಿಸುತ್ತಿದ್ದ ಹೊತ್ತಿಗೆ, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಆರು ದಿನಗಳ ಯುದ್ಧ (Six-Day War) ಪ್ರಾರಂಭವಾಗುತ್ತದೆ.

ಯುದ್ಧದಲ್ಲಿ, ಇಸ್ರೇಲ್ ಯಾವುದೇ ಹೊರಗಿನ ನೆರವಿಲ್ಲದೇ ಅರಬ್ ರಾಷ್ಟ್ರಗಳನ್ನು ಸೋಲಿಸುತ್ತದೆ. ಇಸ್ರೇಲ್‌ನ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ನೋಡಿ ಅಮೇರಿಕ ಒಂದು ಪ್ರಮುಖ ನಿರ್ಧಾರ ಕೈಗೊಳ್ಳುತ್ತದೆ.
ಸೌದಿ ಅರೇಬಿಯಾ ಮತ್ತು ಇರಾನ್‌ನ ಬಳಿಕ, ಮಿಡ್‌ಲ್ ಈಸ್ಟ್‌ನಲ್ಲಿ ಅಮೇರಿಕದ ನಿಜವಾದ, ವಿಶ್ವಾಸಾರ್ಹ ಸಾಥಿಯೆಂದರೆ ಇಸ್ರೇಲ್ ಎಂಬುದು.

ಇಸ್ರೇಲ್ ಒಂದು ಶಕ್ತಿಶಾಲಿ ಸೈನಿಕ ಸಾಮರ್ಥ್ಯ ಹೊಂದಿದ ರಾಷ್ಟ್ರ ಮಾತ್ರವಲ್ಲ ಒಂದು ಪ್ರಜಾಪ್ರಕ್ಭುತ್ವ ರಾಷ್ಟ್ರವೂ ಆಗಿದೆ. ಎಲ್ಲ ಕಾರಣಗಳಿಂದಾಗಿ, ಅಮೇರಿಕ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವು ಬಲವಾಗಿ ರೂಪುಗೊಳ್ಳಲು ಆರಂಭವಾಗುತ್ತದೆ. ಹಾಗಾಗಿ ಇದುವರೆಗೂ ಅವರು ಹಿಂದೆ ತಿರುಗಿ ನೋಡುವ ಅಗತ್ಯವೇ ಬರಲಿಲ್ಲ.

ಸಂಬಂಧದ ನಂತರದ ಕೆಲವು ಪ್ರಮುಖ ಘಟನೆಗಳನ್ನು ನೋಡಿದರೆ:

  • 1973: ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಮತ್ತೊಮ್ಮೆ ಯುದ್ಧ ಜರಗುತ್ತದೆ. ಸಂದರ್ಭ ಅಮೇರಿಕ ಶಶ್ತ್ರಾಸ್ತ್ರ, ಟ್ಯಾಂಕ್‌ಗಳು ಮುಂತಾದವನ್ನೊಂದಿಗೆ ತಕ್ಷಣವೇ ಇಸ್ರೇಲಿಗೆ ನೆರವಾಗಿ, ಯುದ್ಧವನ್ನು ಗೆಲ್ಲಲು ಸಹಾಯ ಮಾಡುತ್ತದೆ.
    ಅಮೇರಿಕದ ನೆರವಿಲ್ಲದೆ ಇಸ್ರೇಲ್ ಗೆಲುವು ಸಾಧಿಸಲು ಸಾಧ್ಯವಿರಲಿಲ್ಲ ಎಂಬುದಾಗಿ ಐತಿಹಾಸಿಕವಾಗಿ ಹೇಳಲಾಗುತ್ತದೆ.
  • 1979: ಇರಾನಿನಲ್ಲಿ ಸಂಭವಿಸಿದ ಇಸ್ಲಾಮಿಕ್ ಕ್ರಾಂತಿ (Islamic Revolution) ಮಹತ್ವದ ಘಟನೆಯಾಗಿದ್ದು, ಪ್ರೋ-ಅಮೇರಿಕನ್ ಆಡಳಿತ (ಷಾ) ಉರುಳಿಹೋಗಿ, ಅಮೇರಿಕ ವಿರೋಧಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದರೊಂದಿಗೆ ಅಮೇರಿಕ ತನ್ನ ಪ್ರಮುಖ ಮಿಡ್‌ಲ್ ಈಸ್ಟ್ ಮಿತ್ರರಲ್ಲೊಬ್ಬನನ್ನು ಕಳೆದುಕೊಳ್ಳುತ್ತದೆ.
  • ನಷ್ಟದಿಂದ ಪಾಠ ಕಲಿತ ಅಮೇರಿಕ, ಉಳಿದಿರುವ ಮಿತ್ರ ರಾಷ್ಟ್ರಗಳನ್ನು ತನ್ನ ಪಾಳಯದಲ್ಲಿ ಬಿಗಿಯಾಗಿ ಇರಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುತ್ತದೆ. ಹಾದಿಯಲ್ಲಿ ಇಸ್ರೇಲ್‌ನೊಂದಿಗೆ ಸಹಕಾರ ಹೆಚ್ಚು ಗಟ್ಟಿಯಾಗುತ್ತದೆ.
  • 1987: ಅಮೇರಿಕ ಇಸ್ರೇಲನ್ನು ಮೇಜರ್ ನಾನ್-ನೆಟೋ ಅಲೈ (Major Non-NATO Ally) ಎಂದು ಘೋಷಿಸುತ್ತದೆ. ಇದು ಅತಿ ವಿರಳವಾಗಿ ದೊರೆಯುವ ಮಾನ್ಯತೆ.
  • ನಂತರ, 2001 ರಲ್ಲಿ ನಡೆದ 9/11 ದಾಳಿ ಅಮೇರಿಕದ ಭದ್ರತಾ ನೀತಿಯಲ್ಲಿ ಭಾರೀ ಬದಲಾವಣೆ ತರುತ್ತದೆ. ದಾಳಿಯಲ್ಲಿ ಭಾಗವಹಿಸಿದ ಪ್ರಮುಖ ತಂತ್ರಗಾರರು ಸೌದಿ ಅರೇಬಿಯಾದ ನಾಗರಿಕರಿದ್ದ ಕಾರಣ, ಅಮೇರಿಕ ಸೌದಿಯನ್ನು ತಾನು ನಂಬಬಲ್ಲ ರಾಷ್ಟ್ರವಾಗಿ ಪರಿಗಣಿಸಲು ಇಚ್ಛಿಸುವುದಿಲ್ಲ ಎಂಬ ನಿಲುವಿಗೆ ಬರುತ್ತದೆ.
  • ವೇಳೆ, ಇರಾನ್ ಈಗಾಗಲೇ ಅಮೇರಿಕದ ಶತ್ರುರಾಷ್ಟ್ರವಾಗಿತ್ತು, ಹಾಗೂ ಅಣ್ವಸ್ತ್ರ ಯೋಜನೆಯತ್ತ ತನ್ನ ನಿಲುವನ್ನು ಮುಂದುವರಿಸಿತ್ತು.

ಎಲ್ಲ ಬದಲಾದ ಸಂದರ್ಭಗಳ ಹಿನ್ನೆಲೆಯಲ್ಲಿ, ಮಿಡ್‌ಲ್ ಈಸ್ಟ್‌ನಲ್ಲಿ ಪೂರ್ಣವಾಗಿ ನಂಬಬಹುದಾದ ಮಿತ್ರ ರಾಷ್ಟ್ರವೆಂದರೆ ಇಸ್ರೇಲ್ ಮಾತ್ರ ಎಂಬುದನ್ನು ಅಮೇರಿಕ ಅರಿತುಕೊಳ್ಳುತ್ತದೆ. ಇದರ ಪರಿಣಾಮವಾಗಿ, ಅಮೇರಿಕ ಮತ್ತು ಇಸ್ರೇಲ್ ನಡುವಿನ ಸಹಕಾರವು ಹೆಚ್ಚಾಗುತ್ತದೆ.

ಈಗ, ಸಂಬಂಧ ಕೇವಲ ರಾಜಕೀಯ ಅಥವಾ ತಾತ್ವಿಕವಷ್ಟೇ ಅಲ್ಲ, ಇದು ಭದ್ರತಾ, ಸೈನಿಕ, ಆರ್ಥಿಕ ಹಾಗೂ ಜಿಯೋಪಾಲಿಟಿಕಲ್ ಮಟ್ಟದಲ್ಲಿಯೂ ಅತ್ಯಂತ ಬಲಿಷ್ಠವಾದ ಸಂಬಂಧವಾಗಿ ರೂಪುಗೊಂಡಿದೆ.

ಇಸ್ರೇಲ್‌ನ ವಿಚಾರವನ್ನೂ ಇದೇ ರೀತಿಯಲ್ಲೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ತನ್ನನ್ನು ಸುತ್ತುವರಿದಿರುವ ಶತ್ರು ರಾಷ್ಟ್ರಗಳ ನಡುವೆ, ಅಮೇರಿಕದೊಂದಿಗಿನ ಸಹಕಾರವಿಲ್ಲದೆ ಮುಂದೆ ಸಾಗುವುದು ಅಸಾಧ್ಯ ಎಂದು ಇಸ್ರೇಲ್ ನಿರ್ಧರಿಸಿತು. ಹಾಗಾಗಿ, ಇಸ್ರೇಲಿಗೂ ಅಮೇರಿಕಕ್ಕೂ ಪರಸ್ಪರ ಅವಲಂಬಿತ ಬಾಂಧವ್ಯ ರೂಪುಗೊಂಡಿತುಇದರಲ್ಲಿ ಓರ್ವನಿಲ್ಲದೆ ಮತ್ತೊಬ್ಬನು ಮುಂದುವರಿಯಲು ಸಾಧ್ಯವಿಲ್ಲ ಎನ್ನುವಂತೆಯಾಗಿದೆ.

ಇದರಿಂದಾಗಿ, ಇಬ್ಬರ ನಡುವಿನ ಕೌಟುಂಬಿಕ ಸ್ಫೂರ್ತಿಯಂಥ ಸುದೃಢ ಮಾದರಿಯ "ಸ್ಟ್ರಾಟೇಜಿಕ್ ಪಾಲುದಾರಿಕೆ (strategic partnership)" ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಹೋಗುತ್ತಿದೆ. ಸಂಬಂಧದಲ್ಲಿ ಕೆಲವೊಮ್ಮೆ ರಾಜಕೀಯ ನಾಯಕರ ನಡುವೆ ಅಭಿಪ್ರಾಯ ಭಿನ್ನತೆಗಳು ಕಂಡುಬರುವುದೂ ಇದೆ.

ಉದಾಹರಣೆಗೆ, ಬರಾಕ್ ಒಬಾಮಾ ಅಮೇರಿಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ, ಅಮೇರಿಕ ಇರಾನ್‌ನೊಂದಿಗೆ ಅಣ್ವಸ್ತ್ರ ಒಪ್ಪಂದ (Nuclear Deal) ನಡೆಸಿದಾಗ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಂದವನ್ನು ತೆರೆದ ಮನಸ್ಸಿನಿಂದ ವಿರೋಧಿಸಿದ್ದರು. ಆದರೆ ಭಿನ್ನಾಭಿಪ್ರಾಯದಿಂದ ಕೂಡಾ, ಇಸ್ರೇಲ್ ಮತ್ತು ಅಮೇರಿಕ ನಡುವಿನ ಪಾಲುದಾರಿಕೆಗೆ ಯಾವುದೇ ಹಾನಿಯಾಗಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಹಾಗಾಗಿ ಅಮೇರಿಕ ಮತ್ತು ಇಸ್ರೇಲ್ ಇವೆರಡೂ ಒಂದಾಗಿ ಸದೃಢ ಬಾಂಧವ್ಯವನ್ನು ಹೊಂದಿವೆ ಎಂಬ ಸತ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಅದಕ್ಕೆ ಕಾರಣ ಏನು?

ಇದರ ಹಿಂದೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು:

1. ಇಸ್ರೇಲ್‌ನ ಭೌಗೋಳಿಕ ಸ್ಥಳ (Geopolitical Location):

ಇಸ್ರೇಲ್ ಪ್ರಪಂಚದ ಅತ್ಯಂತ ಸ್ಟ್ರಾಟೇಜಿಕ್ ಸ್ಥಾನದಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಮಿಡ್‌ಲ್ ಈಸ್ಟ್ ಎಂದರೆ ವಿಶ್ವದ ಅತ್ಯಂತ ಎಣ್ಣೆ ಸಂಪನ್ನ ಪ್ರದೇಶ. ಸುವೆಜ್ ಕಾಲುವೆ (Suez Canal) ಹಾಗೂ ಹಾದಿಯಲ್ಲಿನ ವ್ಯಾಪಾರ ಮಾರ್ಗಗಳು, ಪ್ರತಿದಿನ ಅನೇಕ ಬಿಲಿಯನ್ ಡಾಲರ್‌ಗಳ ವ್ಯಾಪಾರ ಸಾಗಣೆ ಮಾಡುವ ಪ್ರಮುಖ ಹಾದಿಗಳಾಗಿವೆ.

ಹೀಗಾಗಿ, ರೀತಿಯ ಪ್ರಮುಖ ಪ್ರದೇಶದಲ್ಲಿ ಸ್ಥಿರತೆ, ಶಕ್ತಿಯುತತ್ವ ಹಾಗೂ ವಿಶ್ವಾಸಾರ್ಹತೆ ಹೊಂದಿರುವ ಮಿತ್ರ ರಾಷ್ಟ್ರವಿರುವುದು ಅಮೇರಿಕಕ್ಕೆ ಅತ್ಯಂತ ಅಗತ್ಯ. ಇದರಿಂದ, ಇಸ್ರೇಲ್ ಅಮೇರಿಕದ ಪಾಲಿಗೆ ಒಂದು ಅತ್ಯಂತ ಅಮೂಲ್ಯವಾದ ಮಿತ್ರ ರಾಷ್ಟ್ರವಾಗಿ ಪರಿಣಮಿಸಿದೆ.

2. "ಅನ್‌ಸಿಂಕಬಲ್ ಏರ್‌ಕ್ರಾಫ್ಟ್ ಕ್ಯಾರಿಯರ್" ಎಂಬ ಇಸ್ರೇಲ್‌ಗೆ ಲಭಿಸಿದ ಪದವಿ:

ಇಸ್ರೇಲ್‌ಗೆ ಕೆಲವರು ನೀಡಿರುವ ಹೆಸರೇಅಮೇರಿಕದ ಮುಳುಗದ ಎರ್‌ಕ್ರಾಫ್ಟ್ ಕ್ಯಾರಿಯರ್” (Unsinkable Aircraft Carrier). ಏಕೆಂದರೆ ಇಸ್ರೇಲ್‌ನಲ್ಲಿ ಅಮೇರಿಕದ ಯುದ್ಧ ವಿಮಾನಗಳು, ಮಿಸೈಲ್‌ಗಳು, ಶಸ್ತ್ರಾಸ್ತ್ರಗಳ ಮೊದಲಾದವುಗಳ ವಿಶಾಲವಾದ ಸಂಗ್ರಹ (stockpile) ಇದೆ. ಸಂಗ್ರಹವನ್ನು ಇಸ್ರೇಲ್ ಮತ್ತು ಅಮೇರಿಕ ಎರಡೂ ರಾಷ್ಟ್ರಗಳು ಬಳಸಿಕೊಳ್ಳಬಹುದು.

ಮಿಡ್‌ಲ್ ಈಸ್ಟ್‌ನಲ್ಲಿ ಅಮೇರಿಕದ ಇತರ ಮಿಲಿಟರಿ ಬೇಸ್‌ಗಳು ಇದ್ದರೂ, ಇಸ್ರೇಲ್‌ನಂತಹ ನಂಬಬಹುದಾದ ಭದ್ರತಾ ತಂತ್ರಜ್ಞಾನವಿರುವ ಪ್ರಭಾವಶಾಲಿಯಾದ ರಾಷ್ಟ್ರವಿಲ್ಲ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅಥವಾ ಯುದ್ಧ ಸನ್ನಿವೇಶದಲ್ಲಿ, ಅಮೇರಿಕ ಇಸ್ರೇಲ್ ಶೇಖರಣೆಗಳನ್ನು ನೇರವಾಗಿ ಬಳಸಿಕೊಳ್ಳುತ್ತದೆ.

ಹೀಗಾಗಿ, ಇಸ್ರೇಲ್ ಭಾಗದಲ್ಲಿ ಅಮೇರಿಕದ ಭದ್ರತಾ ತಂತ್ರಜ್ಞಾನ, ಸೈನಿಕ ವ್ಯವಸ್ಥೆ ಮತ್ತು ತಕ್ಷಣದ ಪ್ರತಿಕ್ರಿಯೆ ಸಾಮರ್ಥ್ಯಕ್ಕೆ ಕೇಂದ್ರ ಬಿಂದುವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ಎಲ್ಲ ಕಾರಣಗಳಿಂದಾಗಿ, ಇಸ್ರೇಲ್ ಮತ್ತು ಅಮೇರಿಕ ನಡುವಿನ ಸಂಬಂಧವು ಕೇವಲ ಸ್ನೇಹದ ವಿಷಯವಲ್ಲಇದು ಆರ್ಥಿಕ, ಭೌಗೋಳಿಕ, ತಂತ್ರಜ್ಞಾನ, ರಾಜಕೀಯ ಮತ್ತು ಭದ್ರತಾ ನೀತಿಗಳ ಆಧಾರದ ಮೇಲೆ ರೂಪುಗೊಂಡಿದ್ದ ಪರಸ್ಪರ ಅವಲಂಬನೆಯ ಅತ್ಯಂತ ಶಕ್ತಿಶಾಲಿ ಮಾದರಿವಾಗಿದೆ.

ಇನ್ನು ಅಮೇರಿಕ ಇಸ್ರೇಲಿಗೆ ಬೆಂಬಲ ನೀಡುತ್ತಿರುವುದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆಇಸ್ರೇಲ್‌ಗೆ ಹಲವಾರು ಸಂದರ್ಭಗಳಲ್ಲಿ ಅಮೇರಿಕದ ಪ್ರಾಕ್ಸಿ (Proxy)” ಎಂದು ಕೂಡ ಕರೆಸಿಕೊಳ್ಳುವಂತಹ ರಾಜಕೀಯ ಸ್ಥಾನಮಾನ.

ಇಂದಿನ ಸ್ಥಿತಿಗತಿಯನ್ನು ನೋಡಿದರೆ, ಅಮೇರಿಕದ ಶತ್ರುಗಳು ಎಲ್ಲರೂ ಇಸ್ರೇಲ್‌ನ ಶತ್ರುಗಳೂ ಆಗಿದ್ದಾರೆ, ಮತ್ತು ಇಸ್ರೇಲ್‌ನ ಶತ್ರುಗಳು ಎಲ್ಲರೂ ಅಮೇರಿಕದ ಶತ್ರುಗಳೂ ಆಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಹೀಗಾಗಿ, ಮಿಡ್‌ಲ್ ಈಸ್ಟ್‌ನಲ್ಲಿ ಅಮೇರಿಕ ತನ್ನ ಶತ್ರುಗಳ ವಿರುದ್ಧ ನೇರವಾಗಿ ಹಸ್ತಕ್ಷೇಪ ಮಾಡುವ ಬದಲು, ಇಸ್ರೇಲ್‌ನ್ನು ಬಳಸುಸುತ್ತಿರುವುದನ್ನು ನಾವು ಕಾಣಬಹುದು.

ಇದರರ್ಥ, ಅಮೇರಿಕ ನೇರವಾಗಿ ಯುದ್ಧಕ್ಕಿಳಿಯದೆ ಇದ್ದರೂ, ತಮ್ಮ ಆಸಕ್ತಿಗಳನ್ನು ಭಾಗದಲ್ಲಿ ಮುಂದುವರಿಸಿಕೊಳ್ಳಲು ಇಸ್ರೇಲ್‌ನ್ನು ಪ್ರಾಕ್ಸಿಯಾಗಿ ಬಳಸುತ್ತಿದೆ. ಇದು ಅರ್ಥಮಾಡಿಕೊಳ್ಳಬೇಕಾದ ಒಂದು ಪ್ರಮುಖ ರಾಜಕೀಯ ತಂತ್ರವಾಗಿದೆ.

ಈಗ ಇಸ್ರೇಲ್‌ಗೆ ಅಮೇರಿಕದ ರಾಜಕೀಯ ವ್ಯವಸ್ಥೆಯಲ್ಲಿ ಇರುವ ಪ್ರಭಾವ (influence) ಕೂಡ ಇದೇ ಸಂಬಂಧವನ್ನು ಬಲಗೊಳಿಸುತ್ತಿದೆ.

ಅದನ್ನು ತಿಳಿಯಬೇಕಾದರೆ, ಅಮೇರಿಕದ ರಾಜಕೀಯ ವ್ಯವಸ್ಥೆಯಲ್ಲಿ ಅಥವಾ ಚುನಾವಣೆಗಳಲ್ಲಿ ಲಾಬಿಗಳು (Lobby groups) ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ: ಗನ್ ಲಾಬಿ, ಫಾರ್ಮಾಸ್ಯೂಟಿಕಲ್ ಲಾಬಿ, ಟೆಕ್ ಲಾಬಿ ಇತ್ಯಾದಿ.
ಇವು ಎಲ್ಲಾ ತಮ್ಮ ಹಿತಾಸಕ್ತಿಗಳ ಪರವಾಗಿ ರಾಜಕೀಯ ಪ್ರಭಾವ ಬೀರುವ ಕೆಲಸ ಮಾಡುತ್ತವೆ. ಇವುಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಹಣದ ಕೊಡುಗೆ ನೀಡುತ್ತಾರೆ, ತಮ್ಮ ವಿರುದ್ಧ ಇರುವ ಅಭ್ಯರ್ಥಿಗಳನ್ನು ಸೋಲಿಸಲು ವಿರೋಧಿ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಾರೆ.

ಲಾಬಿಗಳ ಮಧ್ಯೆ, ಅಮೇರಿಕದಲ್ಲಿ ಅತ್ಯಂತ ಶಕ್ತಿಶಾಲಿಯಾದ ಲಾಬಿಗಳಲ್ಲೊಂದು ಎಂದರೆ ಪ್ರೋ ಇಸ್ರೇಲಿ ಲಾಬಿಗಳು (Pro-Israeli Lobbies).

ಅದರೊಳಗಿನ ಅತಿ ಪ್ರಭಾವಶಾಲಿ ಸಂಘಟನೆ ಎಂದರೆ AIPAC – American Israel Public Affairs Committee. ಇದು ಅಮೇರಿಕ-ಇಸ್ರೇಲ್ ಸಂಬಂಧವನ್ನು ಬಲಪಡಿಸುವುದು ಮತ್ತು ಪ್ರೋ ಇಸ್ರೇಲ್ ನೀತಿಗಳನ್ನು ಒತ್ತಾಯಿಸುವುದು ಎಂಬ ಉದ್ದೇಶ ಹೊಂದಿರುವ ಒಂದು ದಿಟ್ಟ ಲಾಬಿ ಗುಂಪು. ಇವರು ಕೇವಲ ಅಧ್ಯಕ್ಷೀಯ ಚುನಾವಣೆಗಳಲ್ಲಿ ಮಾತ್ರವಲ್ಲ, ಸ್ಥಳೀಯ ಚುನಾವಣೆಗಳು, ಕಾಂಗ್ರೆಸ್ಸು ಚುನಾವಣೆಗಳಲ್ಲಿಯೂ ಪ್ರಭಾವ ಬೀರುತ್ತಾರೆ. ಪ್ರೋ ಇಸ್ರೇಲ್ ಅಭ್ಯರ್ಥಿಗಳಿಗೆ ಕೋಟಿಗಟ್ಟಲೆ ಹಣವನ್ನು ಒದಗಿಸುತ್ತಾರೆ. ಆಂಟಿ-ಇಸ್ರೇಲ್ ಅಭ್ಯರ್ಥಿಗಳನ್ನು ಸೋಲಿಸಲು ಎದುರಾಳಿ ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತಾರೆ.

 ಉದಾಹರಣೆಗೆ, 1981 ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಗಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಎರಡನೇ ಅವಧಿಗೆ ಸ್ಪರ್ಧಿಸುತ್ತಿದ್ದರು. ಅವರು ಚುನಾವಣೆಗೆ ಮುನ್ನ, ಪ್ಯಾಲೆಸ್ಟೈನ್‌ಗೆ ಸಂಪೂರ್ಣ ಸ್ವಾಯತ್ತತೆ (Full Autonomy) ನೀಡಬೇಕು ಎಂಬ ತತ್ವವನ್ನು ವ್ಯಕ್ತಪಡಿಸಿದ್ದರು. ಆದರೆ, ಚುನಾವಣೆಗಳಲ್ಲಿ ಅವರು ಪರಾಜಿತರಾದರು. ಅವರ ಸೋಲಿಗೆ ಪ್ರೋ ಇಸ್ರೇಲ್ ಲಾಬಿಗಳ ವಿರುದ್ಧದ ಚಟುವಟಿಕೆಗಳು ಕಾರಣವಾಗಿವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ, ಅಮೇರಿಕದ ಚುನಾವಣೆಗಳಲ್ಲಿ ಜಯ ಸಾಧಿಸಲು, ಪ್ರತಿ ಅಭ್ಯರ್ಥಿಯೂ ಲಾಬಿಗಳನ್ನು ತೃಪ್ತಿಪಡಿಸಬೇಕಾಗುತ್ತದೆ.
ಅದರ ಭಾಗವಾಗಿ, ಪ್ರೋ ಇಸ್ರೇಲ್ ನಿಲುವುಗಳನ್ನು ಬಹಿರಂಗವಾಗಿ ಮುಂದಿಟ್ಟು ಅವರು ಸ್ಪರ್ಧಿಸುತ್ತಾರೆ.
ಜಯಶಾಲಿಯಾದ ನಂತರ, ಅವರು ಲಾಬಿಗಳ ಸಹಾಯದಿಂದ ಜಯಶಾಲಿಯಾಗಿರುವುದರಿಂದ, ಹಿತಾಸಕ್ತಿಗಳನ್ನು ಬೆಂಬಲಿಸಬೇಕಾಗಿ ಬರುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಇಸ್ರೇಲ್-ಗಾಜಾ ಯುದ್ಧದ ಸಂದರ್ಭದಲ್ಲಿ ಅಮೇರಿಕದ ಭಾಗದಿಂದ ಪ್ರತಿಷ್ಠಿತ ಆರ್ಥಿಕ ನೆರವು ಇಸ್ರೇಲಿಗೆ ತಲುಪುತ್ತಿರುವುದು. ಸಹಾಯ ಸಂಬಂಧಿತ ಬಿಲ್‌ಗಳು, ಅಮೇರಿಕದ ಕಾಂಗ್ರೆಸ್‌ನಲ್ಲಿ ಬಹುಮತದಿಂದ ಅನುಮೋದನೆ ಪಡೆಯುತ್ತವೆ.

ಹೀಗಾಗಿ, ಪ್ರೋ ಇಸ್ರೇಲ್ ಲಾಬಿಗಳ ಶಕ್ತಿ ಹಾಗೂ ಅವರ ಅಮೇರಿಕದ ರಾಜಕೀಯ ವ್ಯವಸ್ಥೆಯ ಮೇಲಿನ ಪ್ರಭಾವಇವು ಕೂಡ ಎರಡು ರಾಷ್ಟ್ರಗಳ ಬಾಂಧವ್ಯವನ್ನು ಬೆಳೆಸುತ್ತಿರುವ ಪ್ರಮುಖ ಕಾರಣಗಳಾಗಿ ಕಾರ್ಯನಿರ್ವಹಿಸುತ್ತವೆ.

ಇದರಿಂದ, ಅಮೇರಿಕದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಬಹುಮಟ್ಟಿಗೆ ಇಸ್ರೇಲ್ ಪರವಾಗಿಯೇ ಇರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಅದರ ಪರಿಣಾಮವಾಗಿ, ಅಮೇರಿಕ-ಇಸ್ರೇಲ್ ಪಾಲುದಾರಿಕೆ ಹೆಚ್ಚು ಶಕ್ತಿಶಾಲಿಯಾಗಿ ಮುಂದುವರಿಯುತ್ತದೆ.

ಅಮೇರಿಕ ಇಸ್ರೇಲಿಗೆ ಆರ್ಥಿಕವಾಗಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿದಾಗ, ಅದರಿಂದ ಅಮೇರಿಕದ ಆಯುಧ ಉದ್ಯಮಕ್ಕೆ (Weapons Industry) ಅಪಾರ ಲಾಭ ಉಂಟಾಗುತ್ತದೆ ಎಂಬುದನ್ನು ನಾವು ಮನಗಾಣಬೇಕು. ನಾನು ಈಗಾಗಲೇ ವಿವರಿಸಿದಂತೆ, ಅಮೇರಿಕ ಇಸ್ರೇಲಿಗೆ ವಿವಿಧ ಅವಧಿಗಳಲ್ಲಿ ಮಿಲಿಟರಿ ಸಹಾಯ (Military Aid) ರೂಪದಲ್ಲಿ ಅಸಂಖ್ಯ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಆದರೆ ಸಹಾಯಧನ ಬಳಸುವ ಬಗ್ಗೆ ಒಂದು ನಿಬಂಧನೆ ಇದೆ. ಅದೇನೆಂದರೆ ಹಣದ ಹೆಚ್ಚಿನ ಭಾಗವನ್ನು ಅಮೇರಿಕದ ಆಯುಧ ಕಂಪನಿಗಳಿಂದಲೇ ಆಯುಧಗಳನ್ನು ಖರೀದಿಸಲು ಮಾತ್ರ ಬಳಸಬಹುದು ಎಂಬ ನಿಯಮವಿದೆ. ಏಮೇರಿಕಾ ಇಸ್ರೇಲಿಗೆ ನೀಡುವ ಹಣ ಅಮೇರಿಕದ ಕಂಪನಿಗಳ ಕೈಗೆ ಹಿಂತಿರುಗುತ್ತದೆ ಎಂಬುದು ವ್ಯವಸ್ಥೆಯ ಮೂಲತತ್ವ.

ವಿವಿಧ ಅಂಕಿಅಂಶಗಳ ಪ್ರಕಾರ ಇಸ್ರೇಲ್ ಅಮೇರಿಕದ ಆಯುಧ ಖರೀದಿದಾರರ ಪಟ್ಟಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಸ್ರೇಲ್ ಕಳೆದ ವರ್ಷ ಖರೀದಿಸಿದ ಆಯುಧಗಳಲ್ಲಿ ಸುಮಾರು ಮೂರರಲ್ಲಿ ಎರಡು ಭಾಗ (66%) ಆಯುಧಗಳನ್ನು ಅಮೇರಿಕದಿಂದಲೇ ಪರ್ಚೇಸ್ ಮಾಡಿದೆ. ಹೀಗಾಗಿ, ಅಮೇರಿಕ ಇಸ್ರೇಲಿಗೆ ಹಣ ನೀಡಿದರೂ, ಅದು ತಕ್ಷಣವೇ ಅಮೇರಿಕದ "Weapon Lobby" ಗಳಿಗೆ, ಡಿಫೆನ್ಸ್ ಕಂಪನಿಗಳಿಗೆ, ಉದ್ಯಮ ಸಂಗ್ರಹಗಳಿಗೆ ಹಿಂದಿರುಗುತ್ತದೆ.

ಒಟ್ಟಾಗಿ ನೋಡಿದಾಗ, ಬಾಂಧವ್ಯ ಬಹುಮಟ್ಟಿಗೆ ಪರಸ್ಪರ ಲಾಭದ ಪ್ರಕಾರ ರೂಪುಗೊಂಡಿದೆ. ಇಸ್ರೇಲಿಗೆ ಭದ್ರತಾ ಬೆಂಬಲ ಸಿಗುತ್ತದೆ. ಅಮೇರಿಕದ ಆಯುಧ ಉದ್ಯಮಕ್ಕೆ ಭಾರೀ ಲಾಭ. ರಾಜಕೀಯವಾಗಿ ಪ್ರೋ-ಇಸ್ರೇಲ್ ಲಾಬಿಗಳು ಖುಷಿಯಾಗುತ್ತವೆ. ಮತ್ತು ಮಿಡ್‌ಲ್ ಈಸ್ಟ್‌ನಲ್ಲಿ ಅಮೇರಿಕದ ಸೈನಿಕ ಬಲವೂ ಸ್ಥಿರವಾಗುತ್ತದೆ.

ಹೀಗಾಗಿ, ಇದು ಕೇವಲ ರಾಜಕೀಯ ಅಥವಾ ಭದ್ರತಾ ಬಾಂಧವ್ಯವಲ್ಲ, ಇದು ಆರ್ಥಿಕವಾಗಿ, ತಂತ್ರಜ್ಞಾನ, ರಾಜತಂತ್ರದ ಮಟ್ಟದಲ್ಲೂ ಬೃಹತ್ ಮಟ್ಟದಪರಸ್ಪರ ಅವಲಂಬಿತಸಂಬಂಧವಾಗಿದೆ. ಸಂಬಂಧದಲ್ಲಿ, ಒಬ್ಬರು ಇನ್ನೊಬ್ಬರಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ಸ್ಥಿತಿಯನ್ನು ಎರಡೂ ರಾಷ್ಟ್ರಗಳು ಹೊಂದಿವೆ. ಹೀಗಾಗಿ, ಇಸ್ರೇಲಿಗೆ ಯಾವುದಾದರೂ ದೊಡ್ಡ ಸಮಸ್ಯೆ ಉಂಟಾದರೆ, ಅಮೇರಿಕ ಯಾವ ಬೆಲೆ ತೆತ್ತಾದರೂ ಸಹಾಯಕ್ಕೆ ಮುಂದಾಗುತ್ತದೆ. ಅದೇ ರೀತಿ, ಅಮೇರಿಕಕ್ಕೆ ಬೇಕಾದ ಯಾವುದೇ ಮಿಡ್‌ಲ್ ಈಸ್ಟ್ ತಂತ್ರಗಳಲ್ಲಿ, ಇಸ್ರೇಲ್ ಅವಿಭಾಜ್ಯ ಪಾಲುದಾರನಾಗಿಯೇ ಉಳಿಯುತ್ತದೆ.

What's Your Reaction?

like

dislike

love

funny

angry

sad

wow